ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ 5–2–1971

Last Updated 4 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ದೆಹಲಿಯಲ್ಲಿನ ಪಾಕ್ ಹೈಕಮೀಷನ್‌ಗೆ ವಿದ್ಯಾರ್ಥಿಗಳ ಲಗ್ಗೆ

ನವದೆಹಲಿ, ಫೆ, 4– ಪಾಕಿಸ್ತಾನ್ ಹೈಕಮಿಚನರ್‌ ಕಚೇರಿ ಹೊರಗಡೆ ಇಂದು ದೆಹಲಿ ವಿಶ್ವವಿದ್ಯಾಲಯದ ಉದ್ರಿಕ್ತ ವಿದ್ಯಾರ್ಥಿಗಳು ಪ್ರದರ್ಶನ ನಡೆಸುತ್ತಿದ್ದಾಗ ಹೈಕಮಿಷನರ್‌ ಕಚೇರಿ ಒಳಗಿನಿಂದ ಅಲ್ಲಿನ ಸಿಬ್ಬಂದಿ ವರ್ಗದವರೊಬ್ಬರು ಬಂದೂಕಿನಿಂದ ಮೂರು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದರು.

ಲಾಹೋರಿಗೆ ಭಾರತೀಯ ವಿಮಾನ ಅಪಹರಿಸಿಕೊಂಡು ಹೋಗಿ ಅದನ್ನು ಸ್ಫೋಟಗೊಳಿಸಿದ್ದ ಇಬ್ಬರನ್ನು ಭಾರತಕ್ಕೆ ಒಪ್ಪಿಸುವರೆಗೆ ಪಾಕಿಸ್ತಾನಿ ಬಂದರುಗಳ ಮೂಲಕ ಬರುವ ‍ಪಾಕಿಸ್ತಾನಿ ಹಡಗುಗಳನ್ನು ಬಹಿಷ್ಕರಿಸಲು ಮುಂಬಯಿ ಹಡಗು ಕೆಲಸಗಾರರು ನಿರ್ಧರಿಸಿದ್ದಾರೆ.

ಪಾಕಿಸ್ತಾನ ಪ್ರದೇಶಗಳಿಗೆ ಹಾರಿ ಹೋಗದ ಹಾಗೆ ಉತ್ತರ ಬಂದರಿನಲ್ಲಿ ಬಾಗ್‌ದೋಗ್ರಾ ಮೂಲಕ //ಅಖಿಲ ಮಾರ್ಗಗಳಲ್ಲಿ ಈಶಾನ್ಯ ವಿಭಾಗ ಪ್ರಯಾಣಿಕ ವಿಮಾನಗಳು ಹೋಗುವಂತೆ ಭಾರತೀಯ ವಿಮಾನ ಸಾರಿಗೆ ಸಂಸ್ಥೆ ಇಂದು ಹೊಸ ಮಾರ್ಗ ರೂಪಿಸಿದೆ.

ಪಾಕ್‌ ನಾಗರಿಕ ವಿಮಾನಗಳ ಯಾನಕ್ಕೂ ಭಾರತದ ನಿಷೇಧ

ನವದೆಹಲಿ, ಫೆ, 4– ಭಾರತೀಯ ಪ್ರದೇಶದ ಮೇಲೆ ಪಾಕಿಸ್ತಾನದ ನಾಗರಿಕ ವಿಮಾನಗಳ ಯಾನವನ್ನು ತಕ್ಷಣವೇ ನಿಲ್ಲಿಸುವಂತೆ ಪಾಕಿಸ್ತಾನಕ್ಕೆ ಇಂದು ಭಾರತ ಸೂಚಿಸಿದೆ.

ಲಾಹೋರ್ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಭಾರತೀಯ ಅಪಹತ್ಯ ವಿಮಾನವೊಂದನ್ನು ಸುಟ್ಟುಹಾಕಿದ ಕಾರಣ ಭಾರತೀಯ ಪ್ರದೇಶದ ಮೇಲೆ ಪಾಕಿಸ್ತಾನದ ಮಿಲಿಟರಿ ವಿಮಾನಗಳು ಯಾನ ಮಾಡುವುದನ್ನು ಭಾರತ ನಿನ್ನ ನಿಷೇಧಿಸಿರುವುದರ ಜತೆಗೆ ಇಂದು ಈ ಕ್ರಮವನ್ನು ಕೈಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT