ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಶನಿವಾರ, 6.2.1971

Last Updated 5 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಚಂದ್ರನ ಮೇಲೆ ಅಮೆರಿಕದ ಮಿಚೆಲ್, ಷೆಪರ್ಡ್‌ 4 ಗಂಟೆ ಓಡಾಟ

ಹೂಸ್ಟನ್, ಫೆ. 5– ಚಂದ್ರ ಗ್ರಹದ ಮೇಲೆ ಐದನೆಯ ಮಾನವನಾಗಿ ಕಾಲಿಟ್ಟ ಕೀರ್ತಿಗೆ ಗಗನಯಾತ್ರಿ ಅಲನ್‌ ಷೆಪರ್ಡ್‌ ಇಂದು ಭಾಜನರಾದರು. ಅವರಿಳಿದ ಆರು ನಿಮಿಷಗಳ ಬಳಿಕ ಎಡ್ಗರ್‌ ಮಿಚೆಲ್, ಏಣಿಯನ್ನು ಸರಸರ ಇಳಿದು ಅವರ ಜತೆಗೂಡಿದರು.

ಮಧ್ಯವಯಸ್ಸಿನ ಕೋಟ್ಯಧೀಶ ಷೆಪರ್ಡ್‌ ರಾತ್ರಿ 8.24ರ (ಭಾರತೀಯ ಕಾಲಮಾನ) ಸಮಯದಲ್ಲಿ ಚಂದ್ರ ಗ್ರಹದ ಮೇಲೆ ಕಾಲಿಟ್ಟರು. ಅವರು ಮತ್ತು ಮಿಚೆಲ್ ಇದ್ದ ‘ಅಂಟಾರೆಸ್‌’ ಕೋಶ ಗುರಿ ತಪ್ಪದೆ ಚಂದ್ರಸ್ಪರ್ಶ ಮಾಡಿದ ಐದು ಗಂಟೆಗಳ ನಂತರ ಅವರಿಗೆ ಚಂದ್ರನ ಮೇಲೆ ನಡೆಯುವ ಅನುಭವ ದೊರೆಯಿತು.

ಪ್ರಥಮ ಅಮೆರಿಕನ್ನರಾಗಿ ಬಾಹ್ಯಾಕಾಶ ಯಾನ ಮಾಡಿದ್ದ ಷೆಪರ್ಡ್‌ ಈ ಅನುಭವಕ್ಕೆ ಒಂಬತ್ತು ವರ್ಷ ಒಂಬತ್ತು ತಿಂಗಳು ಕಾಯಬೇಕಾಯಿತು.

ಉದ್ರಿಕ್ತ ವಿದ್ಯಾರ್ಥಿಗಳು: ಗಾಳಿಯಲ್ಲಿ ಗುಂಡು

ನವದೆಹಲಿ, ಫೆ. 5– ಇಲ್ಲಿನ ಪಾಕಿಸ್ತಾನ ಹೈಕಮಿಷನರ್‌ ಕಚೇರಿ ಮುಂದೆ ಕಲ್ಲುಗಳನ್ನು ಬೀರುತ್ತಿದ್ದ ಸಾವಿರಾರು ಉದ್ರಿಕ್ತ ಪ್ರದರ್ಶನಕಾರರನ್ನು ಚದುರಿಸಲು ಪೋಲಿಸರು ಇಂದು ಗಾಳಿಯಲ್ಲಿ ಗುಂಡು ಹಾರಿಸಿದರು. ಲಾಹೋರ್‌ ವಿಮಾನ ನಿಲ್ದಾಣದಲ್ಲಿ ಭಾರತದ ಅಪಹೃತ ವಿಮಾನವನ್ನು ಸುಟ್ಟು ಹಾಕಿದನ್ನು ಖಂಡಿಸಿ ವಿದ್ಯಾರ್ಥಿಗಳು ಈ ಕೃತ್ಯಕ್ಕೆ ಮುಂದಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT