ಗುರುವಾರ , ಮೇ 6, 2021
22 °C

50 ವರ್ಷಗಳ ಹಿಂದೆ: ಮಂಗಳವಾರ 30.3.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಚಾರ ವಿಚಾರಗಳ ಅಜಗಜಾಂತರ

ಕಲ್ಕತ್ತ, ಮಾರ್ಚ್ 29– ‘ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನಡುವೆ ಹೋಲುವ ಒಂದು ವಿಷಯವೂ ಇಲ್ಲ. ಇವೆರಡನ್ನೂ ಏಕ ರಾಷ್ಟ್ರವೆಂದು ಕರೆಯಲಾಗದು’ ಎಂದು ಸ್ವತಂತ್ರ ಬಂಗಾಳ ರೇಡಿಯೊ ಹೇಳಿದೆ.

ಭಾಷೆಯಲ್ಲಿ, ಆಚಾರ ವಿಚಾರಗಳಲ್ಲಿ, ಸಂಸ್ಕೃತಿಯಲ್ಲಿ ಬಾಂಗ್ಲಾದೇಶವು ಪಶ್ಚಿಮ ಪಾಕಿಸ್ತಾನಕ್ಕಿಂತಲೂ ತೀರಾ ಭಿನ್ನ.

ಅನೇಕ ವರ್ಷಗಳಿಂದ ಪಶ್ಚಿಮ ಪಾಕಿ ಸ್ತಾನೀಯರು ಬಾಂಗ್ಲಾ ದೇಶವನ್ನು ಶೋಷಿಸುತ್ತಿದ್ದಾರೆ. ಆದರೀಗ ಈ ಶೋಷಣೆಯನ್ನು ತಡೆಯಲು ಬಾಂಗ್ಲಾ ದೇಶದ ಏಳೂವರೆ ಕೋಟಿ ಜನ ಏಕ ಪುರುಷನಂತೆ ಎದ್ದು ನಿಂತಿದ್ದಾರೆ.

ಭಾರತಕ್ಕೆ ಸಹಸ್ರಾರು ನಿರಾಶ್ರಿತರ ಪ್ರವೇಶ

ನವದೆಹಲಿ, ಮಾರ್ಚ್ 29– ಬಾಂಗ್ಲಾ ದೇಶದಲ್ಲಿ ಪಶ್ಚಿಮ ಪಾಕಿಸ್ತಾನದ ಸೈನಿಕರು ನಡೆಸಿರುವ ಘೋರ ಕೃತ್ಯಗಳಿಂದ ನೊಂದಿ ರುವ ಸಾವಿರಾರು ಮಂದಿ ನಿರಾಶ್ರಿತರು ಭಾರತಕ್ಕೆ ಗಡಿ ದಾಟಿ ಬಂದಿದ್ದಾರೆಂದು ಅಧಿಕೃತ ಮೂಲಗಳು ಇಂದು ಇಲ್ಲಿ ತಿಳಿಸಿವೆ.

ಆಡಳಿತಕ್ಕೆ ‘ಚುರುಕು ಚಿಕಿತ್ಸೆ’– ರಾಜ್ಯಪಾಲರಿಂದ ಕಾರ್ಯಾರಂಭ

ಬೆಂಗಳೂರು, ಮಾರ್ಚ್ 29– ಆಡಳಿತಕ್ಕೆ ‘ಚುರುಕು ಚಿಕಿತ್ಸೆ’ ನೀಡುವುದರ ಮೂಲಕ ರಾಜ್ಯಪಾಲ ಶ್ರೀ ಧರ್ಮವೀರ ಅವರು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ನಿರ್ವಹಣೆಯನ್ನು ಇಂದು ಆರಂಭಿಸಿದರು.

ಯುಗಾದಿ ಹಬ್ಬದ ದಿನ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದು ಅಂದಿನಿಂದ ರಾಜ್ಯದ ಆಡಳಿತದ ಹೊಣೆಯನ್ನು ನೇರವಾಗಿ ವಹಿಸಿಕೊಂಡ ರಾಜ್ಯಪಾಲರು ಇಂದು ವಿಧಾನಸೌಧದಲ್ಲಿ ಹಾಜರಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು