ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಶನಿವಾರ 3–4–1971

Last Updated 2 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಅಜಯ್ ಮುಖರ್ಜಿ ಸಂಪುಟದಲ್ಲಿ 25 ಮಂದಿ ಸಚಿವರು

ಕಲ್ಕತ್ತ, ಏ. 2– ಬಂಗಾಳದಲ್ಲಿ 317 ದಿನಗಳ ರಾಷ್ಟ್ರಪತಿ ಆಳ್ವಿಕೆ ನಂತರ 25 ಸಚಿವರಿ‌ರುವ ಆರು ಪಕ್ಷಗಳ ಮಾರ್ಕ್ಸಿಸ್ಟೇತರ ಸಮ್ಮಿಶ್ರ ಸರ್ಕಾರವು ಬಾಂಗ್ಲಾ ಕಾಂಗ್ರೆಸ್ ಅಧ್ಯಕ್ಷ ಅಜಯ್‌ ಕುಮಾರ್ ಮುಖರ್ಜಿ ಅವರ ನಾಯಕತ್ವದಲ್ಲಿ ಇಂದು ಮಧ್ಯಾಹ್ನ ರಾಜಭವನದಲ್ಲಿ ರಾಜ್ಯಪಾಲ ಎಸ್‌.ಎಸ್‌.ಧಾವನ್ ಅವರಿಂದ ಪ್ರಮಾಣವಚನ ಸ್ವೀಕರಿಸಿತು.

ಪ್ರಜಾಸತ್ತಾತ್ಮಕ ಸಂಯುಕ್ತರಂಗದ ಅಂಗ ಪಕ್ಷಗಳೆಂದರೆ: ಆಡಳಿತ ಕಾಂಗ್ರೆಸ್, ಬಾಂಗ್ಲಾ ಕಾಂಗ್ರೆಸ್, ಸಿಪಿಐ, ಫಾರ್‌ವರ್ಡ್‌ ಬ್ಲಾಕ್, ಸಂಸ್ಥಾ ಕಾಂಗ್ರೆಸ್, ಗೂರ್ಖಾಲೀಗ್, ಮುಸ್ಲಿಂ ಲೀಗ್, ಪಿಎಸ್‌ಪಿ (ಬಂಡಾಯ) ಎಸ್‌ಎಸ್‌ಪಿ (ಬಂಡಾಯ).

ಕಷ್ಟಸ್ಥಿತಿಯಲ್ಲಿ ಪಾಕ್ ಸೇನೆ 8 ಗಡಿ ಚೌಕಿ ವಿಮೋಚನಾ ಸೇನೆ ವಶ

ಷಿಲ್ಲಾಂಗ್, ಏ. 2– ಷೇಖ್ ಮುಜೀಬುರ್ ರಹಮಾನರ ವಿಮೋಚನಾ ಸೇನೆಯ ವಿರುದ್ಧ ಸಕಲ ರೀತಿಯ ದಾಳಿಯನ್ನು ಗುರುವಾರ ಆರಂಭಿಸಿದ ಪಶ್ಚಿಮ ಪಾಕಿಸ್ತಾನಿ ದಳಗಳಿಗೆ ಮೊದ ಮೊದಲು ವಿಜಯ ಕಂಡುಬಂದಿತಾದರೂ ಈಗ ಅಷ್ಟು ಸುಲಭವಾಗಿಲ್ಲ ಎಂದು ಇಂದು ಗಡಿಯ ಕಡೆಯಿಂದ ಬಂದ ವರದಿಗಳು ಹೇಳಿವೆ.

ಸ್ವತಂತ್ರ ಬಾಂಗ್ಲಾ ಬಾನುಲಿ ಮೂರನೇ ದಿನವಾದ ಈ ದಿನವೂ ಮೌನವಾಗಿತ್ತು.

ಹೋರಾಟ ನಡೆಯುತ್ತಲೇ ಇದೆ, ಜನತೆ ಸ್ಥೈರ್ಯ ಕೆಟ್ಟಿಲ್ಲ ಎಂದು ಬಾಂಗ್ಲಾದೇಶ ಸರ್ಕಾರ ಹೇಳಿಕೆಯಿತ್ತಿದೆಯೆಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT