ಗುರುವಾರ , ಮೇ 13, 2021
17 °C

50 ವರ್ಷಗಳ ಹಿಂದೆ: ಶುಕ್ರವಾರ 16.4.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ಸರ್ಕಾರಿ ಕಚೇರಿಗಳಿಗೆ ಶನಿವಾರ– ಭಾನುವಾರ ಎರಡೂ ದಿನ ರಜೆ ಸಂಭವ

ಬೆಂಗಳೂರು, ಏ. 15– ಇನ್ನು ಮುಂದೆ ರಾಜ್ಯ ಸರ್ಕಾರದ ನೌಕರರಿಗೆ ವಾರಕ್ಕೆರಡು ದಿನ ರಜಾ. ಶನಿವಾರ ಹಾಗೂ ಭಾನುವಾರ ಬಿಟ್ಟು ಉಳಿದ ದಿನಗಳು ಈಗಿರುವ ಏಳು ಗಂಟೆ ಕೆಲಸದ ಅವಧಿಯ ಬದಲು (ಬೆಳಿಗ್ಗೆ 10.30ರಿಂದ ಸಂಜೆ 5.30) ಇನ್ನು ಮೇಲೆ ಬೆಳಿಗ್ಗೆ 10ರಿಂದ 5.45ರವರೆಗೆ ಇರುವುದು. ಮಾಮೂಲಿನಂತೆ ಪ್ರತಿದಿನ ಅರ್ಧಗಂಟೆ ಊಟದ ಬಿಡುವು ಮುಂದುವರಿಯಲಿದೆ. ಈ ಬಗ್ಗೆ ಸದ್ಯದಲ್ಲೇ ಸರ್ಕಾರದ ಆಜ್ಞೆ ಹೊರಡಲಿದೆ.

ಮೇಲ್ಕಂಡ ಕೆಲಸದ ಕಾಲ ಸೆಕ್ರೆಟೇರಿಯಟ್‌ಗೆ ಅನ್ವಯಿಸಲಿದೆ. ಬೇರೆ ಕಚೇರಿಗಳ ಕೆಲಸದ ಕಾಲ ಬೆಳಿಗ್ಗೆ 9ರಿಂದ ಸಂಜೆ 4.45ರವರೆಗೆ. ಬೆಂಗಳೂರು ನಗರದ ಮಟ್ಟಿಗೆ ಮಾತ್ರ ಈ ರೀತಿ ಕೆಲಸದ ಕಾಲದಲ್ಲಿ ಬದಲಾವಣೆ ಮಾಡಲಾಗುವುದು. ವಾರಕ್ಕೆ ಎರಡು ದಿನ ರಜಾ ಪದ್ಧತಿ ಅಂತರ
ರಾಷ್ಟ್ರೀಯ ಮಾದರಿಯಾಗಿದೆ. ಈಗಾಗಲೇ ಪಂಜಾಬ್‌ನಲ್ಲಿ ಈ ಪದ್ಧತಿ ಜಾರಿಯಲ್ಲಿ ಬಂದಿದೆ.

ಪೂರ್ವ ಬಂಗಾಳದ ಸಮರ: ಪಾಕಿಸ್ತಾನದ ಆಂತರಿಕ ವ್ಯವಹಾರವಲ್ಲ ಎಂದು ರಾಯಭಾರಿ ಕೀಟಿಂಗ್

ಮುಂಬೈ, ಏ. 15– ಪೂರ್ವ ಬಂಗಾಳ ದಲ್ಲಿನ ದಾರುಣ ಘಟನೆಗಳು ಪಾಕಿಸ್ತಾನದ ಆಂತರಿಕ ವ್ಯವಹಾರಗಳೆಂದು ಅಮೆರಿಕ ಸರ್ಕಾರ ಭಾವಿಸದೆಂದು ಭಾರತದಲ್ಲಿನ ಅಮೆರಿಕದ ರಾಯಭಾರಿ ಕೆನೆತ್
ಬಿ. ಕೀಟಿಂಗ್ ಅವರು ಇಂದು ಇಲ್ಲಿ
ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು