ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಢಾಕಾ, ಕಲ್ಕತ್ತದಿಂದ ಭಾರತ–ಪಾಕಿಸ್ತಾನ ಪ್ರತಿನಿಧಿಗಳ ವಾಪಸು

Last Updated 24 ಏಪ್ರಿಲ್ 2021, 18:36 IST
ಅಕ್ಷರ ಗಾತ್ರ

ಢಾಕಾ, ಕಲ್ಕತ್ತದಿಂದ ಭಾರತ–ಪಾಕಿಸ್ತಾನ ಪ್ರತಿನಿಧಿಗಳ ವಾಪಸು

ನವದೆಹಲಿ, ಏ. 24– ಕಲ್ಕತ್ತೆಯಲ್ಲಿರುವ ತನ್ನ ಸಹಾಯಕ ಹೈಕಮೀಷನರ್ ಕಚೇರಿಯನ್ನು ಮು್ಚಲು ನಿರ್ಧರಿಸಿರುವುದಾಗಿ ಪಾಕಿಸ್ತಾನವು ಭಾರತಕ್ಕೆ ಇಂದು ತಿಳಿಸಿತಲ್ಲದೆ ಢಾಕಾದಲ್ಲಿರುವ ಭಾರತದ ಸಹಾಯಕ ಹೈಕಮೀಷನರ್ ಕಚೇರಿಯನ್ನು ಬಂದ್ ಮಾಡುವಂತೆ ದೆಹಲಿಗೆ ಸೂಚಿಸಿತು.

ಪಾಕಿಸ್ತಾನದ ಹೈಕಮೀಷನರ್‌ರಾದ ಸಜ್ಜದ್ ಹೈದರ್‌ರವರು ಪಾಕಿಸ್ತಾನದ ನಿರ್ಧಾರವನ್ನು ಇಂದು ಅಧಿಕೃತವಾಗಿ ಭಾರತಕ್ಕೆ ತಿಳಿಯಪಡಿಸಿದರು.

ಈ ಮಧ್ಯೆ ಪಾಕಿಸ್ತಾನದಲ್ಲಿ ಭಾರತದ ಹೈಕಮೀಷನರ್‌ರಾದ ಬಿ.ಕೆ. ಆಚಾರ್ಯರವರು ಹಠಾತ್ತನೆ ನವದೆಹಲಿಗೆ ಬಂದಿದ್ದಾರೆ. ಪೂರ್ವಬಂಗಾಳದ ಘಟನೆಗಳ ಹಿನ್ನೆಲೆಯಲ್ಲಿ ಭಾರತ–ಪಾಕಿಸ್ತಾನ ನಡುವಣ ಬಾಂಧವ್ಯದ ಸಂಪೂರ್ಣ ವಿಮರ್ಶೇ ಅವರ ಈ ಭಟಿಯ ಮುಖ್ಯ ಉದ್ದೇಶವೆಂದು ಹೇಳಲಾಗಿದೆ. ಕಲ್ಕತ್ತೆಯಲ್ಲಿರುವ ಸಹಾಯಕ ಹೈಕಮೀಷನರ್ ಕಚೇರಿಯನ್ನು ಮುಚ್ಚಲು ಪಾಕಿಸ್ತಾನ ಸರ್ಕಾರ ನಿರ್ಧಾರ ಕೈಗೊಳ್ಳುವುದಕ್ಕೆ ಮುಂಚೆ ಆರ್ಚಾರ್ಯರವರು ಇಸ್ಲಾಮಾಬಾದ್‌ನಿಂದ ಹೊರಟರೆಂದು ಅಧಿಕೃತವಾಗಿ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT