ಮಂಗಳವಾರ, ಸೆಪ್ಟೆಂಬರ್ 21, 2021
21 °C

50 ವರ್ಷಗಳ ಹಿಂದೆ: ಸೋಮವಾರ 26.7.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾನೂನು ಪಾಲನೆ ಸ್ಥಿತಿ ಹಿಂದೆಯೂ ಕೆಟ್ಟಿತ್ತು: ಅರಸು

ಬೆಂಗಳೂರು, ಜುಲೈ 25– ರಾಷ್ಟ್ರಪತಿ ಆಡಳಿತ ಬಂದ ಮೇಲೆ ರಾಜ್ಯದಲ್ಲಿ ಕಾನೂನು ಪಾಲನೆ ಪರಿಸ್ಥಿತಿ ‘ಕೆಟ್ಟಿದೆ’ ಎಂಬ ಶ್ರೀ ಸಿದ್ಧವೀರಪ್ಪ ಅವರ ಅಭಿಪ್ರಾಯವನ್ನು ಆಡಳಿತ ಕಾಂಗ್ರೆಸ್ಸಿನ ಪ್ರದೇಶ ಸಮಿತಿ ಅಧ್ಯಕ್ಷ ಶ್ರೀ ಡಿ. ದೇವರಾಜ ಅರಸು ಅವರು ಒಪ್ಪುವುದಿಲ್ಲ.

ರಾಷ್ಟ್ರಪತಿ ಆಡಳಿತಕ್ಕೆ ಮುಂಚೆಯೂ ಕಾನೂನು ಪಾಲನೆ ಪರಿಸ್ಥಿತಿ ತೃಪ್ತಿಕರವಾಗಿ ಇರಲಿಲ್ಲವೆಂಬ ಶ್ರೀ ಅರಸು ಅವರ ಅಭಿಪ್ರಾಯವೇ ಅವರ ಈ ನಿಲುವಿಗೆ ಕಾರಣ.

ಶ್ರೀ ಸಿದ್ಧವೀರಪ್ಪ ಅವರ ಅಭಿಪ್ರಾಯವನ್ನು ಪ್ರಸ್ತಾಪಿಸಿ ಶ್ರೀಯುತರ ಪ್ರತಿಕ್ರಿಯೆಯನ್ನು ಕೇಳಿದಾಗ ಶ್ರೀ ಅರಸು ಅವರು, ‘ಈಗ ಕೆಟ್ಟಿದೆ ಎಂದರೆ  ಹಿಂದೆ ತೃಪ್ತಿಕರವಾಗಿತ್ತೆಂದು ಅರ್ಥವಾಗುತ್ತದೆ. ಇದನ್ನು ನಾನು ಒಪ್ಪುವುದಿಲ್ಲ. ಹಿಂದೆಯೂ ತೃಪ್ತಿಕರವಾಗಿರಲಿಲ್ಲ ಎಂದು ತೋರಿಸಲು ನನ್ನಲ್ಲಿ ಸಾಕಷ್ಟು ಸಾಕ್ಷ್ಯಗಳಿವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು