ಮಂಗಳವಾರ, ಅಕ್ಟೋಬರ್ 26, 2021
23 °C

50 ವರ್ಷಗಳ ಹಿಂದೆ ಸೋಮವಾರ 11.10.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರಿ ಉದ್ಯಮ ಕ್ಷೇತ್ರಕ್ಕೆ ಶೀಘ್ರವೇ ಕಾಯಕಲ್ಪ ಸಮಿತಿ

ಕೈಲಾಸ ನಗರ, ಅ. 10– ಸರ್ಕಾರಿ ವ್ಯಾಪ್ತಿಗೆ ಸೇರಿದ ಕಾರ್ಖಾನೆಗಳಲ್ಲಿ ಕಾರ್ಯವಿಧಾನ ಗಳನ್ನು ಪರಿಣಾಮಕರವಾಗಿ ಸುಧಾರಿಸುವಂತೆ ಮಾಡಲು ಸರ್ಕಾರವು ಶೀಘ್ರವೇ ಉನ್ನತಾಧಿ ಕಾರ ಸಮಿತಿಯೊಂದನ್ನು ನೇಮಿಸುವುದು.

ಆಡಳಿತ ಕ್ರಮದಲ್ಲಿ ಸುಧಾರಣೆ, ಕಾರ್ಮಿಕರ ಪಾತ್ರ, ಅವರಿಗೆ ನೀಡುವ ಪ್ರೋತ್ಸಾಹ ಹಾಗೂ ದರ ನಿಗದಿ ನೀತಿಗಳ ಕುರಿತು ಈ ಸಮಿತಿ ಸರ್ಕಾರಕ್ಕೆ ಶಿಫಾರಸು ಸಲ್ಲಿಸುವುದು.

ಕೂಡಲಿ ಶೃಂಗೇರಿ ಮಠದ ನೂತನ ಪೀಠಾಧೀಶರಿಂದ ಅಧಿಕಾರ ಸ್ವೀಕಾರ

ಮೈಸೂರು, ಅ. 10– ಕೂಡಲಿ ಶೃಂಗೇರಿ ಮಠದ ನೂತನ ಪೀಠಾಧಿಪತಿಗಳಾಗಿಶ್ರೀವಿದ್ಯಾಭಿನವ ನರಸಿಂಹ ಭಾರತಿ ಸ್ವಾಮಿಗಳು (ಗೌರೀಪುರದ ಶ್ರೀ ಚಿಂತಾಮಣಿ ಸ್ವಾಮಿಗಳು) ಇಂದು ಇಲ್ಲಿ ಅಧಿಕಾರ ವಹಿಸಿ ಕೊಂಡರು.

ಕೂಡಲಿ ಶೃಂಗೇರಿ ಪೀಠಾಧೀಶರಾಗಿದ್ದ ಶ್ರೀ ಶಂಕರ ಭಾರತಿ ಸ್ವಾಮಿಗಳು ನಿಧನರಾದ ನಂತರ, 11 ತಿಂಗಳಿಂದ ಪೀಠಾಧೀಶರ ಸ್ಥಾನ ತೆರವಾಗಿ ಉಳಿದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು