ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ, 28–01–1972

Last Updated 27 ಜನವರಿ 2022, 19:30 IST
ಅಕ್ಷರ ಗಾತ್ರ

ಪ್ರಥಮ ಮಹಿಳಾ ‘ಭಾರತ ರತ್ನ’

ನವದೆಹಲಿ, ಜ. 27– ರಾಷ್ಟ್ರಪತಿ ಭವನದ ದರ್ಬಾರ್‌ ಹಾಲ್‌ನಲ್ಲಿ ಬುಧವಾರ ನಡೆದ ವಿಶೇಷ ಪ್ರಶಸ್ತಿ ವಿತರಣ ಸಮಾರಂಭದಲ್ಲಿ ಪ್ರಧಾನಿ ಇಂದಿರಾಗಾಂಧಿ ಅವರು ‘ಭಾರತ ರತ್ನ’ ಪ್ರಶಸ್ತಿಯನ್ನು ಸ್ವೀಕರಿಸಿದರು.

ರಾಷ್ಟ್ರಪತಿ ಶ್ರೀ ವಿ.ವಿ. ಗಿರಿ ಅವರು ಸಭಿಕರ ಹರ್ಷೋದ್ಗಾರಗಳ ಮಧ್ಯೆ ಪ್ರಧಾನಿ ಅವರಿಗೆ ರಾಷ್ಟ್ರದ ಅತ್ಯುನ್ನತ ಗೌರವವಾದ ಈ ಪ್ರಶಸ್ತಿಯನ್ನು ನೀಡಿದರು.

ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ತಯಾರಿಕೆಯಲ್ಲಿ ಕೇಂದ್ರಕ್ಕೆಹಲವು ಸಮಸ್ಯೆ

ನವದೆಹಲಿ, ಜ. 27– ಮೈಸೂರು ವಿಧಾನಸಭೆ ಚುನಾವಣೆಗಳಿಗೆ ಸ್ಪರ್ಧಿಸುವ ಆಡಳಿತ ಕಾಂಗ್ರೆಸ್‌ ಪಕ್ಷದ ಉಮೇದುವಾರರ ಪಟ್ಟಿ
ಸಿದ್ಧಪಡಿಸಲು ಪಕ್ಷದ ಪ್ರಾದೇಶಿಕ ಚುನಾವಣೆಸಮಿತಿ ಇಂದು ತನ್ನ ಪರಿಶೀಲನೆ ಮುಂದುವರಿಸಿತು.ಸಮಿತಿಯು ಬೆಂಗಳೂರು ಬದಲು ಇಲ್ಲಿ ಸಭೆ ಸೇರಿರುವುದರಿಂದ ಅದರ ಮೇಲೆ ಸ್ಥಳೀಯ ಒತ್ತಡಗಳು ತಪ್ಪಿದಂತಾಗಿದೆ.

ಎಂ.ಪಿ.ಸಿ.ಸಿ ಅಧ್ಯಕ್ಷ ಶ್ರೀ ದೇವರಾಜ ಅರಸು ಅವರು, ಸಮಿತಿಯ ಕೆಲಸ ಸುಗಮವಾಗಿ ನಡೆಯುತ್ತಿದೆಯೆಂದು ಹೇಳಿಕೊಂಡಿದ್ದರೂ ಉಮೇದುವಾರಿಕೆ ಬಯಸಿರುವವರ ಸ್ಥಾನಮಾನ ಮತ್ತು ಕೋಮುಗಳ ಆಧಾರದ ಮೇಲೆ ತೀವ್ರ ಚೌಕಾಶಿನಡೆಯುತ್ತಿರುವಂತಿದೆ. ಯಾವುದೇ ಆಯ್ಕೆಯಲ್ಲಿ ಇವುಗಳ ಪರಿಗಣನೆ ಅನಿವಾರ್ಯವೆನಿಸಿದರೂ ಅದರಿಂದ ಸರಿಯಿಲ್ಲದಂತಹಉಮೇದುವಾರರನ್ನು ಆರಿಸಿದಂತೆ ಆಗಬಾರದು ಎಂದು ಕೆಲವರು ವಾದಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT