ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಗುರುವಾರ 13.4.1972

Last Updated 12 ಏಪ್ರಿಲ್ 2022, 15:42 IST
ಅಕ್ಷರ ಗಾತ್ರ

ವಿಶೇಷ ಪ್ರತಿನಿಧಿಗಳ ಮಟ್ಟದ ಮಾತುಕತೆಗೆ ಭುಟ್ಟೋ ಒಪ್ಪಿಗೆ

ನವದೆಹಲಿ, ಏ. 12– ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರಿಗೆ ಪಾಕಿಸ್ತಾನದ ಅಧ್ಯಕ್ಷ ಜಡ್. ಎ. ಭುಟ್ಟೋ ಅವರು ಬರೆದ ಪತ್ರವನ್ನು ಪ್ರಧಾನಿಯ ಮುಖ್ಯ ಆಪ್ತ ಕಾರ್ಯದರ್ಶಿ ಶ್ರೀ ಪಿ.ಎನ್. ಹಕ್ಸರ್ ಅವರಿಗೆ ಸ್ವಿಸ್ ರಾಯಭಾರಿ ಫ್ರಿಟ್ಜ್‌ರಿಯಲ್ ಅವರು ಇಂದು ಮಧ್ಯಾಹ್ನ ತಲುಪಿಸಿದರು.

ಭುಟ್ಟೋರವರ ಪತ್ರದಲ್ಲಿನ ವಿಷಯ ಗಳನ್ನು ಇಲ್ಲಿ ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಭುಟ್ಟೋರವರು ರಾವಲ್ಪಿಂಡಿ ಯಲ್ಲಿ ಸುದ್ದಿಗಾರರೊಡನೆ ಇಂದು ಮಾತ ನಾಡಿದಾಗ ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಯಬೇಕೆಂಬ ಶ್ರೀಮತಿ ಗಾಂಧಿ ಅವರ ಸೂಚನೆಯನ್ನು ತಾವು ಒಪ್ಪಿಕೊಂಡಿರುವುದಾಗಿ ಖಚಿತಪಡಿಸಿದರು.

ಭಾರತದ ಸೂಚನೆಗೆ ಪಾಕಿಸ್ತಾನದ ಪ್ರತಿ ಕ್ರಿಯೆ ‘ಅನುಕೂಲಕರ’ವಾಗಿದೆಯೆಂದು ರಾವ ಲ್ಪಿಂಡಿಯಿಂದ ಬಂದ ವರದಿಗಳು ತಿಳಿಸಿವೆ.

ದೇಶದಲ್ಲಿ ಲೆಕ್ಕ ಸಿಕ್ಕದ ಕಪ್ಪು ಹಣದ ಮೊತ್ತ ಎಷ್ಟು?

ನವದೆಹಲಿ, ಏ. 12– ತೆರಿಗೆ ತಪ್ಪಿಸಿಕೊಳ್ಳುವಿಕೆ ಮತ್ತು ಕಪ್ಪು ಹಣ ಕುರಿತು ವಾಂಛೂ ಸಮಿತಿ ಮಾಡಿರುವ ಶಿಫಾರಸುಗಳ ಬಗ್ಗೆ ಚರ್ಚಿಸಲು ಆರ್ಥಿಕ ವಿಷಯಗಳ ಸಂಸದೀಯ ಸಮಾಲೋಚನಾ ಸಮಿತಿಯ ವಿಶೇಷ ಸಭೆಯು ಮುಂದಿನ ತಿಂಗಳು ನಡೆಯಲಿದೆ.

ಮಾಜಿ ಶಿಕ್ಷಣ ಸಚಿವ ಶ್ರೀ ವಿ.ಕೆ.ಆರ್.ವಿ. ರಾವ್ ಅವರು ಈ ವಿಷಯವನ್ನು ಇಂದು ಇಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಚರ್ಚೆಗಾಗಿ ಎತ್ತಿದರು. ಆದರೆ, ವಿಷಯದ ಮಹತ್ವದ ದೃಷ್ಟಿಯಿಂದ ಪ್ರತ್ಯೇಕ ಸಭೆಯಲ್ಲಿ ಇದನ್ನು ಚರ್ಚಿಸಲು ನಿರ್ಧರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT