ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: 16–041972

Last Updated 15 ಏಪ್ರಿಲ್ 2022, 15:16 IST
ಅಕ್ಷರ ಗಾತ್ರ

ಉದ್ಯೋಗವಿದ್ದವರಿಗೆ ಜಮೀನು ಒಡೆತನ ನಿಷೇಧ ಸಂಭವ

ಬೆಂಗಳೂರು, ಏ.15– ನಿರ್ದಿಷ್ಟ ಉದ್ಯೋಗವಿರುವವರು ಜಮೀನು ಹೊಂದಿರುವುದನ್ನು ನಿಷೇಧಿಸುವ ವಿಧಿಯೊಂದು ಸರ್ಕಾರ ವಿಧಾನ ಮಂಡಲದ ಜೂನ್‌ ಅಧಿವೇಶನದಲ್ಲಿ ಮಂಡಿಸುವ ಸಮಗ್ರ ಭೂಸುಧಾರಣೆ ತಿದ್ದುಪಡಿ ವಿಧೇಯಕದಲ್ಲಿರುವ ಸಂಭವವಿದೆ.

ಇಂಥ ಕ್ರಮ ಅಗತ್ಯವೆಂದು ಭಾವಿಸುವ ಮುಖ್ಯಮಂತ್ರಿ ಶ್ರೀ ಅರಸು ಅವರ ಅಭಿಪ್ರಾಯಕ್ಕೆ ಪಕ್ಷದಲ್ಲಿ ಎಷ್ಟರಮಟ್ಟಿಗೆ ಬೆಂಬಲ ದೊರಕುತ್ತದೆ ಎಂಬುದನ್ನು, ಈ ವಿಧಿ ಅಂತಿಮವಾಗಿ ಶಾಸನದಲ್ಲಿ ಸೇರುವುದು ಅವಲಂಬಿಸಿದೆ.

‘ಬೇಸಾಯ ಮಾಡದ ಭೂ ಒಡೆತನ ಹೋಗಲೇಬೇಕೆಂದು ನನಗೆ ಮನದಟ್ಟಾಗಿದೆ’ ಎಂದರು.

ನಿರುದ್ಯೋಗಿ ಕುಟುಂಬದಲ್ಲಿ ಕನಿಷ್ಠ ಒಬ್ಬರಿಗಾದರೂ ಕೆಲಸ; ಸರ್ಕಾರದ ಪರಿಶೀಲನೆಯಲ್ಲಿ

ಬೆಂಗಳೂರು,ಏ.15– ತಮ್ಮ ಕುಟುಂಬದಲ್ಲಿ ಈವರೆಗೂ ಯಾರಿಗೂ ಉದ್ಯೋಗ ದೊರೆಯದೇ ಇರುವಂಥ ಕುಟುಂಬಗಳಲ್ಲಿ ಒಬ್ಬರಿಗಾದರೂ ಉದ್ಯೋಗ ಒದಗಿಸುವ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಕಾರ್ಮಿಕ ಸಚಿವ ಶ್ರೀ ಅಜೀಜ್‌ ಸೇಠ್‌ ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು.

ಶ್ರೀ ಟಿ.ಆರ್‌. ಶಾಮಣ್ಣ (ಪಕ್ಷೇತರ ಕೋಟ) ಮತ್ತು ಶ್ರೀ ಎಂ.ಎಸ್‌. ಕೃಷ್ಣನ್‌ (ಕಮ್ಯುನಿಸ್ಟ್‌ ಮಲ್ಲೇಶ್ವರ) ಅವರ ಮೂಲ ಪ್ರಶ್ನೆಗಳ ಮೇಲೆ ಬಂದ ಉಪ ಪ್ರಶ್ನೆಗಳಿಗೆ ಉತ್ತರ ನೀಡಿದ ಅವರು ‘ರಾಜಕಾರಣಿಗಳ ಪ್ರಭಾವದಿಂದ ಇವತ್ತು ಅವರ ನಂಟರುಗಳಿಗೆ ಮಾತ್ರ ಕೆಲಸಗಳು ಸಿಕ್ಕಿವೆ ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT