ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಶನಿವಾರ, 4–11–1972

Last Updated 3 ನವೆಂಬರ್ 2022, 19:45 IST
ಅಕ್ಷರ ಗಾತ್ರ

ವಿಯಟ್ನಾಂನಲ್ಲಿ ಶಾಂತಿ ಇನ್ನೂ ದೂರ– ನಿಕ್ಸನ್‌

ವಾಷಿಂಗ್ಟನ್‌, ನ. 3– ವಿಯಟ್ನಾಂನಲ್ಲಿ ಯುದ್ಧ ನಿಂತು ಶಾಂತಿ ಉಂಟಾಗಲು ಇನ್ನೂ ಕೆಲವು ವಾರಗಳು ಬೇಕಾಗಬಹುದು ಎಂದು ಅಮೆರಿಕ ಅಧ್ಯಕ್ಷ ರಿಚರ್ಡ್‌ ನಿಕ್ಸನ್‌ ಅವರು ಗುರುವಾರ ಇಲ್ಲಿ ಸೂಚಿಸಿದರು.

‘ವಿಯಟ್ನಾಂ ಶಾಂತಿ ಒಪ್ಪಂದ ಇತ್ಯರ್ಥಗೊಳಿಸಲು ನಾವು ಸಿದ್ಧರಿದ್ದೇವೆ. ಆದರೆ ಶಾಂತಿ ಒಪ್ಪಂದ ಮಾಡಿಕೊಳ್ಳುವಂತೆ ನಮ್ಮನ್ನು ಒತ್ತಾಯದಲ್ಲಿ ಸಿಕ್ಕಿಸುವಂಥ ಚುನಾವಣಾ ಗಡವು ಅಥವಾ ಇನ್ನಾವುದೇ ರೀತಿಯಲ್ಲಿ ಗಡುವನ್ನು ಒಪ್ಪಿಕೊಳ್ಳುವುದಿಲ್ಲ. ಇಂಥ ಒಪ್ಪಂದ ಹಂಗಾಮಿ ಕದನವಿರಾಮವಾದೀತೆ ಹೊರತು ಶಾಶ್ವತ ಶಾಂತಿ ಒಪ್ಪಂದವಾಗದು’ ಎಂದು ಅವರು ಗುರುವಾರ ಇಲ್ಲಿ ತಿಳಿಸಿದರು.

ಏಷ್ಯ ರಾಷ್ಟ್ರಗಳ ಏಕತೆ, ಸಹಕಾರಕ್ಕೆ ಪ್ರಧಾನಮಂತ್ರಿ ಕರೆ

ನವದೆಹಲಿ, ನ. 3– ಆರ್ಥಿಕವಾಗಿ ಸಶಕ್ತವಾಗಲು, ಸ್ವಾವಾಲಂಬಿಯಾಗಲು ಹಾಗೂ ಹೊರಗಡೆಯ ಶಕ್ತಿಯಿಂದ ಈ ವಿಭಾಗವನ್ನು ಮುಕ್ತಗೊಳಿಸಲೂ ಏಷ್ಯಾ ರಾಷ್ಟ್ರಗಳು ಒಗ್ಗೂಡಬೇಕೆಂದು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಕರೆ ನೀಡಿದರು.

ಮೇಳದ ಹಂಸಧ್ವನಿ ವರ್ತುಲ ನಾಟಕ ಶಾಲೆಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಮೂರನೇ ಏಷ್ಯಾ ಅಂತರರಾಷ್ಟ್ರೀಯ ವಾಣಿಜ್ಯ ಮೇಳ ‘ಏಷ್ಯಾದ ವಿಸ್ತಾರಣಾಕಾಂಕ್ಷೆಯ ಸಂಕುಚಿತ ತತ್ವವಾಗಿರಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT