ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷದ ಹಿಂದೆ | ಕೃಷ್ಣಾ ಪಂಚಾಯಿತಿ ಪಕ್ಷಪಾತ; ರಾಜ್ಯಕ್ರಮಕ್ಕೆ ಸಂಪೂರ್ಣ ಬೆಂಬಲ

Published : 23 ಆಗಸ್ಟ್ 2024, 0:06 IST
Last Updated : 23 ಆಗಸ್ಟ್ 2024, 0:06 IST
ಫಾಲೋ ಮಾಡಿ
Comments

ಕೃಷ್ಣಾ ಪಂಚಾಯಿತಿ ಪಕ್ಷಪಾತ; ರಾಜ್ಯಕ್ರಮಕ್ಕೆ ಸಂಪೂರ್ಣ ಬೆಂಬಲ

ಬೆಂಗಳೂರು,ಆ.22: ಕೃಷ್ಣಾ ಜಲವಿವಾದ ಪಂಚಾಯ್ತಿಯ ಪ್ರವೃತ್ತಿಯು ಪಕ್ಷಪಾತ ತನವನ್ನು ಸ್ಪಷ್ಟಪಡಿಸುತ್ತಿದೆ ಎಂದು ವಾದಿಸಿ, ಅದರ ಕಾರ್ಯಕಲಾಪಗಳಿಂದ ಹೊರಬಂದ ಕರ್ನಾಟಕದ ಅಡ್ವೊಕೇಟ್ ಜನರಲ್ ಅವರ ಕ್ರಮವನ್ನು ವಿಧಾನಸಭೆ ಇಂದು ಸರ್ವಾನುಮತದ ನಿರ್ಣಯ ಅಂಗೀಕರಿಸಿ ಬೆಂಬಲಿಸಿತು.

‘ಏನಾಗುತ್ತೋ ಆಗಲಿ, ಪರಿಣಾಮ ಯೋಚಿಸುವ ಕಾಲ ಇದಲ್ಲ’ ಎಂದು ರಾಜ್ಯದ ನ್ಯಾಯ ಸಮರವನ್ನು ನೇರವಾಗಿ ಕೇಂದ್ರದ ಬಾಗಿಲಿಗೆ ಒಯ್ದು ಮುಖ್ಯಮಂತ್ರಿ ಶ್ರಿ ದೇವರಾಜ ಅರಸು ಇಷ್ಟೆಲ್ಲ ಬೆಳವಣಿಗೆಗಳ ನಂತರ ರಾಜ್ಯಕ್ಕೆ ಆದ ಅನ್ಯಾಯವನ್ನು ಕೇಳದೇ ಕೇಂದ್ರಕ್ಕೆ ಗತ್ಯಂತರವಿಲ್ಲ ಎಂದು ಸಭೆಗೆ ತಿಳಿಸಿದರು.

ರಾಜ್ಯದ ವಿಚಾರದಲ್ಲಿ ಕೇಂದ್ರದ ತಾರತಮ್ಯ ನೀತಿ : ಹೆಗೆಡೆ ಟೀಕೆ

ಬೆಂಗಳೂರು,ಆ.22: ಕರ್ನಾಟಕದ ವಿಚಾರದಲ್ಲಿ ಕೇಂದ್ರ ಸರಕಾರ ತಾರತಮ್ಯ ಭಾವನೆ ತೋರುತ್ತಿದೆ ಎಂದು ವಿಧಾನ ಪರಿಷತ್ತಿನಲ್ಲಿ ಇಂದು ವಿರೋಧಪಕ್ಷದ ನಾಯಕ ಶ್ರಿ ರಾಮಕೃಷ್ಣ ಹೆಗಡೆ ಅವರು ಆಪಾದನೆ ಮಾಡಿದರು.

ಕಾಳಿನದಿ ಯೋಜನೆಯನ್ನು ಐದನೇ ಯೊಜನೆಯಲ್ಲಿ ಸೇರಿಸಿದ್ದನ್ನು ಆಕ್ಷೇಪಿಸಿದ ಅವರು ಕೇಂದ್ರ ಸರಕಾರ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ವಿಚಾರದಲ್ಲಿ ಆಂಧ್ರದ ಬಗ್ಗೆ ವಿಶೇಷ ಒಲವು ತೋರಿ ಕರ್ನಾಟಕವನ್ನು ಕಡೆಗಣಿಸಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT