ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ ಈ ದಿನ: ಆಹಾರ ಅಭಾವದಿಂದ ಕೋಟ್ಯಂತರ ಸಾವು?

Published : 1 ಸೆಪ್ಟೆಂಬರ್ 2024, 19:16 IST
Last Updated : 1 ಸೆಪ್ಟೆಂಬರ್ 2024, 19:16 IST
ಫಾಲೋ ಮಾಡಿ
Comments

ಆಹಾರ ಅಭಾವದಿಂದ ಈ ವರ್ಷ ವಿಶ್ವದಲ್ಲಿ ಕೋಟ್ಯಂತರ ಸಾವು?

ನ್ಯೂಯಾರ್ಕ್‌, ಸೆ. 1– ಆಹಾರದ ಅಭಾವದಿಂದ ಈ ವರ್ಷ ಜಗತ್ತಿನಾದ್ಯಂತ ಕೋಟ್ಯಂತರ ಮಂದಿ ಸಾಯಬಹುದು.

ಅನಾವೃಷ್ಟಿ ಹಾಗೂ ವಿದ್ಯುತ್ ಕೊರತೆಯಿಂದ ಗೊಬ್ಬರದ ಉತ್ಪಾದನೆ ಇಳಿಮುಖವಾಗಿರುವುದು ಆಹಾರದ ಅಭಾವಕ್ಕೆ ಕಾರಣ.

ಕೆಲವು ವರ್ಷಗಳ ಕೆಳಗೆ ಏಷ್ಯಾದಲ್ಲಿ ‘ಹಸಿರು ಕ್ರಾಂತಿ’ ಚಳವಳಿಗೆ ಕಾರಣಕರ್ತರಾದ ನೊಬೆಲ್ ಪ್ರಶಸ್ತಿ ವಿಜೇತರೂ ಸಸ್ಯಶಾಸ್ತ್ರ ವಿಜ್ಞಾನಿಯೂ ಆದ ಡಾ. ನಾರ್ಮನ್ ಬೋರ್ಲಾಗ್ ಅವರು ಹಸಿವಿನಿಂದ ಜನ ಸಾಯುವರೆಂಬ ಎಚ್ಚರಿಕೆ ನೀಡಿದ್ದಾರೆ.ಅರವತ್ತು ವರ್ಷ ವಯಸ್ಸಿನ ಬೋರ್ಲಾಗ್ ಅವರು ಇಲ್ಲಿ ನೀಡಿದ ಸಂದರ್ಶನದಲ್ಲಿ ಈ ಮಾತು ಹೇಳಿದ್ದಾರೆ.

ಆಧ್ಯಾತ್ಮಿಕ ಜೀವನಕ್ಕೆ ಮರಳಲು ಉಪರಾಷ್ಟ್ರಪತಿ ಜತ್ತಿ ಕರೆ

ನವದೆಹಲಿ, ಸೆ. 1– ಜನತೆಯು ಆಧ್ಯಾತ್ಮಿಕ ಜೀವನಕ್ಕೆ ಮರಳುವ ಹಾಗೂ ಧರ್ಮವು ಬೋಧಿಸುವ ನೀತಿ, ಆದರ್ಶಗಳನ್ನು ಅನುಸರಿಸುವ ಅಗತ್ಯವನ್ನು ಉಪರಾಷ್ಟ್ರಪತಿ ಶ್ರೀ ಜತ್ತಿ ಅವರು ಇಂದು ಇಲ್ಲಿ ಒತ್ತಿ ಹೇಳಿದರು.

ಬದುಕಿನ ಮೇಲೆ ಯಾಂತ್ರಿಕತೆ, ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಭಾವ ಹೆಚ್ಚಾಗಿ ಮನುಷ್ಯನೇ ಹೆಚ್ಚುಕಮ್ಮಿ ಸರ್ವಶಕ್ತನೆಂಬ ಭಾವನೆ ಬೆಳೆ ಯುತ್ತಿರುವುದನ್ನು ತಡೆಗಟ್ಟದಿದ್ದ ಪಕ್ಷದಲ್ಲಿ ಮುಂದಿನ ಜನಾಂಗ ಅಪಾಯಕ್ಕೊಳಗಾಗು ವುದೆಂದು ತಿಳಿಸಿದರು. ಶ್ರೀ ರಮಣಮಹರ್ಷಿ ಕೇಂದ್ರದ ಉದ್ಘಾಟನೆಯನ್ನು ಶ್ರೀ ಜತ್ತಿ ಅವರು ನೆರವೇರಿಸುತ್ತ, ‘ಯಾಂತ್ರಿಕತೆಯ ದುಷ್ಪರಿಣಾ ಮಗಳಿಗೆ ಉತ್ತಮ ಔಷಧಿಯೆಂದರೆ ಆಧ್ಯಾತ್ಮಿಕ ಜೀವನಕ್ಕೆ ವಾಪಸಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT