ಭಾನುವಾರ, ಮೇ 9, 2021
33 °C
50 ವರ್ಷಗಳ ಹಿಂದೆ ಮಂಗಳವಾರ 20.4.1971

50 ವರ್ಷಗಳ ಹಿಂದೆ ಮಂಗಳವಾರ 20.4.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ಬಿಟ್ಟು ಬೇರೆಡೆ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲು ಸೂಚನೆ

ಬೆಂಗಳೂರು, ಏ. 19– ಬೆಂಗಳೂರಿನಲ್ಲಿಯೇ ಕೈಗಾರಿಕೆಗಳನ್ನು ಕೇಂದ್ರೀಕರಿಸುವುದನ್ನು ರಾಜ್ಯಪಾಲ ಶ್ರೀ ಧರ್ಮವೀರರವರು ವಿರೋಧಿಸುತ್ತಾರೆ.

‘ಕಲಕತ್ತೆಯ ಪರಿಸ್ಥಿತಿ ಬೆಂಗಳೂರಿನಲ್ಲಿಯೂ ಆಗುವುದು ನನಗಿಷ್ಟವಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿ, ರಾಜ್ಯದ ಬೇರೆ ಬೇರೆ ಪಟ್ಟಣಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವಂತೆ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.

ಇಡೀ ಸಿಲ್ಹೆಟ್ ಜಿಲ್ಲೆ ಮುಕ್ತಿಫೌಜ್ ವಶ

ಶಿಲ್ಲಾಂಗ್, ಏ. 19– ಸಿಲ್ಹೆಟ್ ಪಟ್ಟಣದಿಂದ ಸುಮಾರು ಹತ್ತು ಕಿಲೊ ಮೀಟರ್ ದೂರದಲ್ಲಿರುವ ಆಯಕಟ್ಟಿನ ಷಾಲೂಟಕಾರ್ ವಿಮಾನ ನಿಲ್ದಾಣವನ್ನು ಇಂದು ಮಧ್ಯಾಹ್ನ ಬಾಂಗ್ಲಾದೇಶದ ವಿಮೋಚನಾ ಸೇನೆಯು ವಶಪಡಿಸಿಕೊಂಡಿತು.

ವಿಮಾನ ನಿಲ್ದಾಣ ವಶವಾದ್ದರಿಂದ ಇಡೀ ಸಿಲ್ಹೆಟ್ ಜಿಲ್ಲೆಯಿಂದ ಪಾಕಿಸ್ತಾನಿ ಸೈನಿಕರನ್ನು ಹೊಡೆದಟ್ಟಿದಂತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು