ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ| ಗುರುವಾರ 22.4.1971

50 ವರ್ಷಗಳ ಹಿಂದೆ ಗುರುವಾರ 22.4.1971
Last Updated 21 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಪಕ್ಷಾಂತರ ಪ್ರವೃತ್ತಿ ರಾಜಕೀಯ ಅಧಃಪತನ, ಅನೈತಿಕತೆಗೆ ಹಾದಿ– ಎಸ್ಸೆನ್

ಬೆಂಗಳೂರು, ಏ. 21– ಒಂದು ಪಕ್ಷವನ್ನು ಸೇರಿ, ಅದರಲ್ಲಿ ತಮಗೆ ಭವಿಷ್ಯವಿಲ್ಲ ಎಂದು ಮತ್ತೊಂದಕ್ಕೆ ಹಾರುವುದು ಅನೈತಿಕತೆ ಹಾಗೂ ರಾಜಕೀಯ ಅಧಃಪತನಕ್ಕೆ ಕಾರಣವಾಗುವುದೆಂದು ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್.ನಿಜಲಿಂಗಪ್ಪನವರು ಇಂದು ಪಕ್ಷಾಂತರ ಪ್ರವೃತ್ತಿಯನ್ನು ಉಗ್ರವಾಗಿ ಖಂಡಿಸಿದರು.

ಮೈಸೂರು ರಾಜ್ಯದಲ್ಲಿ ಸಂಸ್ಥಾ ಕಾಂಗ್ರೆಸ್ಸಿನಿಂದ ಪಕ್ಷಾಂತರಗೊಂಡವ ರಲ್ಲಿ ಕೆಲವರು ವಾಪಸು ಬರಲು ಷರತ್ತು ಹಾಕಿರುವುದು ತಮಗೆ ತಿಳಿದುಬಂದಿತೆಂದು ವರದಿಗಾರರಿಗೆ ತಿಳಿಸಿದರು.

ಕನ್ನಡದಲ್ಲಿ ಕೃಷಿ ವಿಜ್ಞಾನ ಸಾಹಿತ್ಯ ರಚನೆ

ಬೆಂಗಳೂರು, ಏ. 21–ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯವು ಕನ್ನಡದಲ್ಲಿ ಕೃಷಿ ವಿಜ್ಞಾನ ಸಾಹಿತ್ಯ ರಚಿಸಲು ಉದ್ದೇಶಿಸಿದೆ.

ಕೃಷಿ ವಿದ್ಯಾರ್ಥಿಗಳು ಹಾಗೂ ಪ್ರಗತಿಪರ ಕೃಷಿಕರ ಉಪಯೋಗಕ್ಕಾಗಿ ವ್ಯವಸಾಯ, ಮೀನುಗಾರಿಕೆ ಮುಂತಾದ ವಿಷಯಗಳ ಮೇಲೆ ಪುಸ್ತಕಗಳನ್ನು ಪ್ರಕಟಿಸುವ ಯೋಜನೆಯನ್ನು ಇಟ್ಟುಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT