ಭಾನುವಾರ, ಆಗಸ್ಟ್ 14, 2022
20 °C

50 ವರ್ಷದ ಹಿಂದೆ: 28-6-1992

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲಪ್ರಭಾದಲ್ಲಿ ಮಹಾಪೂರ: ಆರು ಗ್ರಾಮಗಳ ಮುಳುಗಡೆ

ಬೆಂಗಳೂರು, ಜೂನ್‌ 27– ಮಲಪ್ರಭಾ ನದಿಗೆ ಭಾರಿ ಮಳೆಯ ಪರಿಣಾಮ ಮಹಾಪೂರ್‌ ಬಂದು ಬೆಳಗಾವಿ ಜಿಲ್ಲೆಯ 33 ಗ್ರಾಮಗಳಿಗೆ ಗಂಡಾಂತರ ಪರಿಸ್ಥಿತಿ ಉಂಟಾಗಿದೆ ಎಂದು ಇಲ್ಲಿಗೆ ಬಂದ ಅಧಿಕೃತ ವರದಿಗಳಿಂದ ತಿಳಿದುಬಂದಿದೆ.

ಈ ಎಲ್ಲ ಹಳ್ಳಿಗಳನ್ನು ತೆರವು ಮಾಡಬೇಕೆಂದು ಅಲ್ಲಿನ ನಿವಾಸಿಗಳಿಗೆ ಸರ್ಕಾರ ಆದೇಶ ನೀಡಿದೆ. ಆರು ಹಳ್ಳಿಗಳು ಮುಳುಗಡೆ ಪರಿಸ್ಥಿತಿಗೆ ಗುರಿಯಾಗಿದ್ದು, ಇನ್ನು 24 ಗಂಟೆಗಳಲ್ಲಿ ತೆರವು ಮಾಡಬೇಕೆಂದು ಗ್ರಾಮ ನಿವಾಸಿಗಳಿಗೆ ಆದೇಶ ನೀಡಲಾಗಿದೆ.

ನಗರ ಆಸ್ತಿ ವಿಲೇವಾರಿ ವಿರುದ್ಧ ಸರ್ಕಾರದ ಕ್ರಮ

ಬೆಂಗಳೂರು, ಜೂನ್ 27– ನಗರ ಆಸ್ತಿಗೆ ಎರಡು ಲಕ್ಷ ರೂ. ಮಿತಿ ವಿಧಿಸಬೇಕೆಂಬಯತ್ನವನ್ನು ತಪ್ಪಿಸಿಕೊಳ್ಳಲು ಹಲವು ಶ್ರೀಮಂತರು ಮಿತಿಗೆ ಮೀರಿದ ಆಸ್ತಿ ವಿಲೇವಾರಿ ಮಾಡುತ್ತಿರುವುದಕ್ಕೆ ತಡೆ ಹಾಕುವ ಬಗ್ಗೆ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳುವ ಸಂಭವವಿದೆ.

ಈ ವಿಚಾರವನ್ನು ಇಂದು ವರದಿಗಾರರೊಡನೆ ಮಾತನಾಡುತ್ತಿದ್ದ ಮುಖ್ಯಮಂತ್ರಿ ಶ್ರಿ ಡಿ.ದೇವರಾಜ ಅರಸ್‌ ಅವರು ಪರೋಕ್ಷವಾಗಿ ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು