ಗುರುವಾರ, 19.7.1973
ಬೆಂಗಳೂರು, ಜುಲೈ 18– ರಾಜ್ಯದ ಲೋಕೋಪಯೋಗಿ ಇಲಾಖೆಯ ಹಾಸನ ವಿಭಾಗದಲ್ಲಿ ಭಾರೀ ಪ್ರಮಾಣದ ಹಣದ ಅವ್ಯವಹಾರ ನಡೆದಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಶ್ರೀ ಎಚ್.ಡಿ.ದೇವೇಗೌಡರು ಆಪಾದಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಕೃಪೆಗೆ ಪಾತ್ರರಾದ ಹಾಗೂ ರಾಜಕೀಯ ಬೆಂಬಲ ಪಡೆದಿರುವ ಕೆಲವು ಮಂದಿ ಕಂಟ್ರಾಕ್ಟರುಗಳಿಗೆ ಅಕ್ರಮವಾಗಿ 40 ರಿಂದ 45 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ ಎಂದೂ ಅವರು ಆಪಾದಿಸಿದ್ದಾರೆ.
****
ಬೆಂಗಳೂರು, ಜುಲೈ 18– ತಲೆಯ ಮೇಲೆ ಮಲ ಹೊತ್ತು, ಶುದ್ಧಿ ಮಾಡುವ ಭಂಗಿಗಳು ಆಗಸ್ಟ್ 15ರಿಂದ ಈ ಕೆಲಸ ನಿಲ್ಲಿಸಿಬಿಡುತ್ತಾರೆ ಎಂದು ಪೌರಾಡಳಿತ ಮಂತ್ರಿ ಶ್ರೀ ಬಸವಲಿಂಗಪ್ಪ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.
ಈ ಸಂಬಂಧದಲ್ಲಿ ಕೆಲವು ತಿಂಗಳುಗಳ ಹಿಂದೆಯೇ ಪುರಸಭೆಗಳಿಗೆ ಸೂಚನೆ ನೀಡಲಾಗಿದ್ದು, ಎಲ್ಲಿ ಯಾವ ಮನೆಗಳಲ್ಲಿ ಕಕ್ಕಸು ವ್ಯವಸ್ಥೆಯಿಲ್ಲವೋ ಅಂಥ ಕಡೆ ಫ್ಲಷ್‌ಔಟ್ ಕಕ್ಕಸು ಅದಿಲ್ಲದ ಕಡೆ ಕಕ್ಕಸುಗುಂಡಿಗಳನ್ನು ಮನೆ ಮಾಲಿಕರು ಕಟ್ಟಿಸುವಂತೆ ಮಾಡಬೇಕೆಂದು ಸರ್ಕಾರ ಆದೇಶ ನೀಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.