ಸೋಮವಾರ, ಸೆಪ್ಟೆಂಬರ್ 26, 2022
22 °C

50 ವರ್ಷಗಳ ಹಿಂದೆ: ವಾರ 00–00–00

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

l ಮೈಸೂರು ರಾಜ್ಯದಲ್ಲೂ ಶ್ರೀಮಂತ ರೈತರು

ನವದೆಹಲಿ, ಸೆಪ್ಟೆಂಬರ್‌ 16– ರಾಷ್ಟ್ರದಲ್ಲಿ ಅಸಂಖ್ಯಾತ ಮಂದಿ ಶ್ರೀಮಂತ ರೈತ ಕುಟುಂಬಗಳಿರುವ ಏಳು ರಾಜ್ಯಗಳಲ್ಲಿ ಮೈಸೂರು ರಾಜ್ಯವೂ ಒಂದು ಎಂದು ಆರ್ಥಿಕ ಮತ್ತು ವೈಜ್ಞಾನಿಕ ಸಂಶೋಧನಾ ಪ್ರತಿಷ್ಠಾನ (ಖಾಸಗಿ ಸಂಸ್ಥೆ) ನಡೆಸಿದ ಸಮೀಕ್ಷೆಯಿಂದ ವ್ಯಕ್ತಪಟ್ಟಿದೆ.

ಶ್ರೀಮಂತ ಕುಟುಂಬಗಳಿರುವ ಏಳು ರಾಜ್ಯಗಳು: ಪಂಜಾಬ್‌, ಹರಿಯಾಣ, ರಾಜಸ್ತಾನ್, ಗುಜರಾತ್‌, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಮೈಸೂರು. ಸಮಗ್ರ ರಾಷ್ಟ್ರದಲ್ಲಿ ‘ಭಾರಿ ಆದಾಯವಿರುವ’ ಶ್ರೀಮಂತ ಕುಟುಂಬಗಳಲ್ಲಿ 7/10 ಭಾಗದಷ್ಟು ಮಂದಿ ಈ ಏಳು ರಾಜ್ಯಗಳಲ್ಲಿದ್ದಾರೆ. ರೈತ ಕುಟುಂಬಗಳ ಹತ್ತು ವರ್ಷದ ಕೃಷಿ ಆದಾಯದ ಬಗ್ಗೆ (1960–61
ರಿಂದ 1970–71) ಅಂದಾಜು ಮಾಡಲಾಗಿದೆ.

l ಲೆಬನಾನ್‌ ತೀರಾ ಒಳಕ್ಕೆ ಇಸ್ರೇಲಿ ಪಡೆ ಮತ್ತಿಗೆ: ಎರಡು ಸೇತುವೆಗಳ ಧ್ವಂಸ

ಟೆಲ್‌ ಆವೀವ್‌, ಸೆಪ್ಟೆಂಬರ್‌ 16– ಲೆಬನಾನ್‌ನಲ್ಲಿ ಹಿಂದೆಂದೂ ಹೋಗದಿದ್ದಷ್ಟು ತೀರಾ ಒಳಕ್ಕೆ ಇಂದು ಇಸ್ರೇಲಿ ಟ್ಯಾಂಕ್‌ಗಳು ಮತ್ತು ಇನ್‌ಫೆಂಟ್ರಿ ದಳ ನುಗ್ಗುತ್ತಿದ್ದರೆ ಇನ್ನೊಂದು ಕಡೆ ಇಸ್ರೇಲಿ ಜೆಟ್‌ಗಳು ಲಿಟಾನಿ ನದಿಗೆ ಕಟ್ಟಿದ್ದ ಎರಡು ಸೇತುವೆಗಳನ್ನು ಧ್ವಂಸ  ಮಾಡಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು