ಮದ್ರಾಸ್: ಖ್ಯಾತ ಕರ್ನಾಟಕ ಸಂಗೀತಗಾರ ಚೆಂಬೈ ವೈದ್ಯನಾಥ ಭಾಗವತ್ ಅವರು ಕೇರಳದ ಒಟ್ಟಪ್ಪಾಲಂನಲ್ಲಿ ಹೃದಯಾಘಾತದಿಂದ ಬುಧವಾರ ರಾತ್ರಿ 10-30 ಗಂಟೆಗೆ ನಿಧನರಾದರು.

ಇಲ್ಲಿರುವ ಅವರ ಸಂಬಂಧಿಕರಿಗೆ ಟೆಲಿಗ್ರಾಂ ಮೂಲಕ ಸಾವಿನ ಸುದ್ದಿ ಬಂದಿದೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.ಭಾಗವತ್ ಅವರು ಒಟ್ಟಪ್ಪಾಲಂನಲ್ಲಿರುವ ಶ್ರೀಕೃಷ್ಣ ದೇವಸ್ಥಾನದಲ್ಲಿ ಎರಡು ಗಂಟೆ ಸಂಗೀತ ಕಾರ್ಯಕ್ರಮ ನೀಡಿದ್ದರು. ಅದಾದ ಬಳಿಕ ಅವರು ಅಸ್ವಸ್ಥರಾದರು ಎಂದು ಪತ್ನಿ ಮತ್ತು ಪುತ್ರಿಗೆ ಬಂದಿರುವ ಟೆಲಿಗ್ರಾಂ ಸಂದೇಶ ತಿಳಿಸಿದೆ. ಪಾರ್ಥಿವ ಶರೀರವನ್ನು ಪಾಲ್ಘಾಟ್ ನಲ್ಲಿರುವ ಅವರ ಸ್ವಗ್ರಾಮ ಚೆಂಬೈಗೆ ಗುರುವಾರ ಬೆಳಿಗ್ಗೆ ಕೊಂಡೊಯ್ದು, ಮಧ್ಯಾಹ್ನ ಅಂತ್ಯಕ್ರಿಯೆ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.