(ಪ್ರಜಾವಾಣಿ ಪ್ರತಿನಿಧಿಯಿಂದ) ಮಂಗಳೂರು, ಆಗಸ್ಟ್ 10– ಈಗಿರುವ ಕಾನೂನು ಪ್ರಕಾರ ಪ್ರವಾಹ ಸಂತ್ರಸ್ತರಿಗೆ ಸರ್ಕಾರ ಕೊಡಬಹುದಾದ 800 ರೂ. ಗರಿಷ್ಠ ಮೊತ್ತವನ್ನು ತಾವು ಒಂದು ಸಾವಿರಕ್ಕೆ ಏರಿಸಿರುವುದಾಗಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಇಂದು ಇಲ್ಲಿ ತಿಳಿಸಿದರು.
ನಷ್ಟದ ಆಧಾರದ ಮೇಲೆ ಇಲ್ಲಿನ ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆದೇಶಿಸಿರುವುದಾಗಿ ಅವರು ಹೇಳಿದರು. ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು