ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಭಾನುವಾರ 22–8–1971

Last Updated 21 ಆಗಸ್ಟ್ 2021, 20:30 IST
ಅಕ್ಷರ ಗಾತ್ರ

ರಾಜ್ಯದ ಅಭಾವ ಪೀಡಿತ ಪ್ರದೇಶಗಳಿಗೆ ಆಹಾರ ಧಾನ್ಯ ಸರಬರಾಜು ಆರಂಭ

ಬೆಂಗಳೂರು, ಆ.21– ರಾಜ್ಯದ ಅಭಾವ ಪೀಡಿತ ಪ್ರದೇಶಗಳಿಗೆ 2500 ಟನ್‌ ಗೋಧಿ ಹಾಗೂ 1000 ಟನ್‌ ಕೆಂಪು ಜೋಳವನ್ನು ಸರಬರಾಜು ಮಾಡುವ ಕಾರ್ಯವನ್ನು ಭಾರತದ ಆಹಾರ ಕಾರ್ಪೋರೇಷನ್‌ ಆರಂಭಿಸಿದೆ.

ಈ ಸರಬರಾಜಿಗಾಗಿ ರಾಜ್ಯ ಸರಕಾರ ಕೋರಿತ್ತು. ಸರಕಾರದ ಪ್ರಾರ್ಥನೆ ಮೇರೆಗೆ ರಾಜಾಸ್ತಾನದಿಂದ 5000 ಟನ್‌, ರಾಜ್ಯ ಹಾಗೂ ಕಡೆಗಳಿಂದ 400 ಟನ್‌ ಜೋಳವನ್ನು ಅಭಾವ ಪೀಡಿತ ಪ್ರದೇಶಗಳಿಗೆ ಒದಗಿಸಲು ಕಾರ್ಪೊರೇಷನ್ ಕ್ರಮ ಕೈಗೊಂಡಿದೆ.

ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಳೆದ ಹಿಂಗಾರು ಬೆಳೆಯ ಹಾಗೂ ಶಿವಮೊಗ್ಗ, ಭದ್ರಾವತಿ, ಹರಿಹರ ಹಾಗೂ ದಾವಣಗೆರೆ ತಾಲ್ಲೂಕುಗಳಲ್ಲಿ ಮುಂಗಾರು ಬೆಳೆಯ ಲೆವಿ ವಸೂಲಿ ಮಾಡುವ ಕಾರ್ಯವನ್ನು ಕಾರ್ಪೊರೇಷನ್‌ಗೆ ವಹಿಸಲಾಗಿತ್ತೆಂದು ಕಾರ್ಪೊರೇಷನ್ನಿನ ಬೆಂಗಳೂರು ಪ್ರಾದೇಶಿಕ ಕಚೇರಿಯ ವಿಶೇಷ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT