ಕೇರಳ ಬಂದ್: ಉದ್ರಿಕ್ತ ಗುಂಪಿನ ಮೇಲೆ ಗುಂಡು ಮೂವರ ಸಾವು
ತಿರುವನಂತಪುರ, ಆಗಸ್ಟ್ 2– ಐದು ವಿರೋಧ ಪಕ್ಷಗಳ ಕರೆಯ ಮೇರೆಗೆ ಕೇರಳ ಇಂದು ಆಚರಿಸಿದ ಭಾಗಶಃ ಬಂದ್‌ನಲ್ಲಿ ಪೊಲೀಸ್ ಗೋಲಿಬಾರ್‌ನಿಂದ ಇಬ್ಬರು, ಇರಿತದಿಂದ ಒಬ್ಬ ಹೀಗೆ ಒಟ್ಟು ಮೂವರು ಸತ್ತರು.
ಅಲೆಪ್ಪಿಗೆ ನಲವತ್ತೈದು ಕಿಲೋಮೀಟರ್ ದೂರದಲ್ಲಿರುವ ಪಂಡಾಲಂ ಬಳಿಯ ಪುರಂಬಾಲ ಗ್ರಾಮದಲ್ಲಿ ಮೂರು ಸಾವಿರ ಜನರ ಗುಂಪು ಕಾರೊಂದರ ಮೆಲೆ ಕಲ್ಲಿನ ಮಳೆಗರೆದದ್ದನ್ನು ಅನುಸರಿಸಿ ಪೊಲೀಸರು ಗುಂಡು ಹಾರಿಸಿದರು.
ಹನ್ನೆರಡು ಔನ್ಸ್ ಪಡಿತರ ಸಿಗುವಂತೆ ಸಾಕಷ್ಟು ಆಹಾರ ಧಾನ್ಯವನ್ನು ಸರಬರಾಜು ಮಾಡುವುದಾಗಿ ವಚನವಿತ್ತಿದ್ದ ಕೇಂದ್ರ ಸರ್ಕಾರವು ತನ್ನ ವಚನವನ್ನು ಪಾಲಿಸದೇ ಇರುವುದರ ವಿರುದ್ಧ ಐದು ಪಕ್ಷಗಳು ‘ಕೇರಳ ಬಂದ್’ಗೆ ಕರೆ ಇತ್ತಿದ್ದವು.
ಸರ್ಕಾರದ ಸುಗ್ರೀವಾಜ್ಞೆ
ರಾಜ್ಯದಾದ್ಯಂತ ಖಾಸಗಿ ಶಾಲಾ ಕಾಲೇಜು ಶಿಸ್ತು, ವ್ಯವಹಾರ ನಿಯಂತ್ರಣ
ಬೆಂಗಳೂರು, ಆಗಸ್ಟ್ 2– ರಾಜ್ಯದಾದ್ಯಂತ ಇರುವ ಖಾಸಗಿ ಶಾಲಾ, ಕಾಲೇಜುಗಳ ಶಿಸ್ತು ಮತ್ತು ವ್ಯವಹಾರಗಳ ಮೇಲೆ ನಿಯಂತ್ರಣ ವಿಧಿಸಿ, ಅವುಗಳ ಅವ್ಯವಹಾರಗಳಿಗೆ ತಡೆಹಾಕುವ ಸುಗ್ರೀವಾಜ್ಞೆಯೊಂದನ್ನು ರಾಜ್ಯ ಸರ್ಕಾರ ಹೊರಡಿಸಿದೆ.
ಕಳೆದ ಕೆಲವು ವರ್ಷಗಳಿಂದ, ವಿಧಾನ ಮಂಡಲದಲ್ಲಿಯೂ ಇನ್ನಿತರ ವೇದಿಕೆಗಳಲ್ಲಿ ಬಹುವಾಗಿ ಟೀಕೆಗೆ ಒಳಗಾಗಿರುವ ಈ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಇದೀಗ ಪ್ರಥಮ ಬಾರಿ ಸರ್ಕಾರದ ಪರಿಣಾಮಕಾರಿ ಹತೋಟಿ ಬರಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.