ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಭಾನುವಾರ 29-10-1972

Last Updated 28 ಅಕ್ಟೋಬರ್ 2022, 21:16 IST
ಅಕ್ಷರ ಗಾತ್ರ

ಕೇಂದ್ರ ಹೊಸ ಕೈಗಾರಿಕಾಸಂಬಂಧ ಅಧ್ಯಯನ

ಬೆಂಗಳೂರು, ಅಕ್ಟೋಬರ್‌ 28– ರಾಷ್ಟ್ರದ ಕೈಗಾರಿಕಾ ಕ್ಷೇತ್ರವನ್ನು ಸತ್ವಯುತವಾಗಿ ಮಾಡಬಲ್ಲ, ಕಾರ್ಮಿಕರ ‘ಅರ್ಥಪೂರ್ಣ ಸಹಭಾಗಿತ್ವ’ವುಳ್ಳ ಹೊಸ ಕೈಗಾರಿಕಾ ಸಂಬಂಧ ವ್ಯವಸ್ಥೆಯೊಂದರ ನಿರೂಪಣೆಗೆ ಕೇಂದ್ರ ಸರ್ಕಾರ ಅಧ್ಯಯನ ಆರಂಭಿಸಿದೆ.

ಕಾರ್ಮಿಕ ಸಾಮರ್ಥ್ಯವು ಅನವಶ್ಯಕ ದಾರಿಗಳಲ್ಲಿ ಅಪವ್ಯಯವಾಗುತ್ತಿರುವುದನ್ನು ತಪ್ಪಿಸುವುದರ ಜತೆಗೆ, ಈ ಕ್ಷೇತ್ರದಲ್ಲಿ ಏಳುತ್ತಿರುವ ಅಶಾಂತಿಗೆ ಪರಿಹಾರ ತರುವ ವ್ಯವಸ್ಥೆಯನ್ನು ಕಾರ್ಮಿಕರುತಮ್ಮ ಹೊಣೆಯರಿತು ವರ್ತಿಸುವಂತಿರಬೇಕು ಎಂದು ಕೇಂದ್ರ ಕೈಗಾರಿಕಾಭಿವೃದ್ಧಿ ಮಂತ್ರಿ ಸಿ. ಸುಬ್ರಹ್ಮಣ್ಯಂ ಅವರು ಇಂದು ಇಲ್ಲಿ ಹೇಳಿದರು.

ಸಿ. ಸುಬ್ರಹ್ಮಣ್ಯಂ ಮೊದಲ ಗಿರಾಕಿ!

ಬೆಂಗಳೂರು, ಅಕ್ಟೋಬರ್‌ 28– ಎಚ್‌.ಎಂ.ಟಿಯು ದೇಶದಲ್ಲಿ ಪ್ರಥಮ ಬಾರಿಗೆ ತಯಾರಿಸಿರುವ ದಿನ ಮತ್ತು ದಿನಾಂಕಗಳುಳ್ಳ ಸ್ವತಚ್ಚಲಿ ಕೈಗಡಿಯಾರದ ಮೊದಲನೆ ಗಿರಾಕಿ ಕೇಂದ್ರ ಕೈಗಾರಿಕಾಭಿವೃದ್ಧಿ ಮಂತ್ರಿ ಸಿ. ಸುಬ್ರಹ್ಮಣ್ಯಂ. ಎರಡನೆಯವರು ರಾಜ್ಯಪಾಲ ಮೋಹನ್‌ಲಾಲ್‌ ಸುಖಾಡಿಯಾ.

ಕೈಗಡಿಯಾರಗಳನ್ನು ಬಿಡುಗಡೆ ಮಾಡಿದ ರಾಜ್ಯ ಕೈಗಾರಿಕಾ ಮಂತ್ರಿ ಎಸ್‌.ಎಂ. ಕೃಷ್ಣ ಅವರು, ಇಬ್ಬರಿಗೂ, ವೇದಿಕೆ ಮೇಲಿದ್ದ ಇತರರಿಗೂ ಕೈಗಡಿಯಾರಗಳನ್ನು ಹಂಚಿದರು. ತಕ್ಷಣ ಏನೋ ಹೊಳೆದಂತೆ ಎದ್ದು ನಿಂತ ಸುಬ್ರಹ್ಮಣ್ಯಂ ಅವರು, ‘ಇವುಗಳನ್ನು ಬಹುಮಾನವಾಗಿ ನಮಗೆ ಕೊಟ್ಟಿದ್ದಾರೆ. ಆದರೆ ನಾವು ಅದನ್ನು ಕೊಳ್ಳಲಿದ್ದೇವೆ. ನಾವು ಪ್ರತಿಯೊಬ್ಬರು ಹಣ ಕೊಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT