ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಗುರುವಾರ 3.8.1972

Last Updated 2 ಆಗಸ್ಟ್ 2022, 21:30 IST
ಅಕ್ಷರ ಗಾತ್ರ

‘ಜಾತಿಯ ಅಸ್ತ್ರ ಬಳಸಿದರೆ ಆ ಆಟನಮ್ಮ ಮುಂದೆ ಸಾಗದು’

ಬೆಂಗಳೂರು, ಆ. 2– ಬಹುಸಂಖ್ಯಾತ ಜಾತಿಗಳನ್ನು ಈಗಿನ ಸರ್ಕಾರ ತುಳಿಯಲು ಪ್ರಯತ್ನಿಸುತ್ತಿದೆ ಎಂದ ಆಪಾದನೆಗಳನ್ನು ವಿಧಾನಸಭೆಯಲ್ಲಿ ಇಂದು ಸ್ಪಷ್ಟವಾಗಿ ನಿರಾ ಕರಿಸಿದ ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು, ಜಾತಿ ಹೆಸರೆತ್ತಿ ತಮ್ಮ ಮೇಲೆ ತಿರುಗಿಬಿದ್ದರೆ, ‘ಆ ಆಟ ನಡೆಯೋಲ್ಲ’ ಎಂದು ಸಂಸ್ಥಾ ಕಾಂಗ್ರೆಸ್ಸಿಗರಿಗೆ ಬಿಡಿಸಿ ಹೇಳಿದರು.

ಶಾಸಕರಾಗಿ ಯಾರೊಬ್ಬರಿಗೂ ಅವರವರ ಜಾತಿ ಪರವಾಗಿ ಮಾತನಾಡುವ ಅಧಿಕಾರ ಇಲ್ಲ; ಅವರು ಆರಿಸಿ ಬಂದ ಕ್ಷೇತ್ರದಲ್ಲಿ ಎಲ್ಲ ಜಾತಿಯವರೂ ಮತ ನೀಡಿದ್ದಾರೆ ಎಂದು ಜ್ಞಾಪಿಸಿಕೊಟ್ಟ ಶ್ರೀ ಅರಸು ಅವರು ಜಾತಿ ಬಗ್ಗೆ ‘ಹೇಳುವವರು ಹೆಡ್ಡರಾದರೂ ಕೇಳುವವರು ಕಿವುಡರಲ್ಲ’ ಎಂದು ಕರತಾಡನಗಳ ಮಧ್ಯೆ ತಿಳಿಸಿದರು.

ವಿರೋಧಪಕ್ಷದ ನಾಯಕ ಶ್ರೀಎಚ್.ಡಿ.ದೇವೇಗೌಡರು, ‘ರಾಜ್ಯದಲ್ಲಿ ವಿವಿಧ ಜಾತಿಗಳವರು ಪಡೆದುಕೊಂಡ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲು ಸಮಿತಿ ರಚಿಸಬೇಕೆಂದು ಮಂಡಿಸಿದ ಸೂಚನೆ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಅರಸು ಅವರು ‘ಜಾತಿ ಆಧಾರದ ಮೇಲೆ ವಿವರ ಸಂಗ್ರಹಿಸಲು ಸಮಿತಿ ನೇಮಕ ಸಾಧ್ಯವಿಲ್ಲ; ಅದರಿಂದ ಪ್ರಯೋಜನವೂ ಇಲ್ಲ’ಎಂದರು.

ಸಿಮ್ಲಾ ಒಪ್ಪಂದದಿಂದ ಭಾರತದ ಬಲವರ್ಧನೆ: ಇಂದಿರಾ ಸಮರ್ಥನೆ

ನವದೆಹಲಿ, ಆ. 2– ಸಿಮ್ಲಾ ಒಪ್ಪಂದವು ಉಪಖಂಡದಲ್ಲಿ ‘ಶಾಂತಿ ಸ್ಥಾಪನೆ ಕಡೆಗೆ ಒಂದು ಹೊಸ ಪ್ರಾರಂಭ’ ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರುರಾಜ್ಯಸಭೆಯಲ್ಲಿ ಘೋಷಿಸಿ, ಇದರಿಂದ ಭಾರತ ಭವಿಷ್ಯದ ಸವಾಲನ್ನು ಉತ್ತಮ ಸ್ಥಿತಿಯಿಂದ ಎದುರಿಸುವಂತಾಗಿದೆ
ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT