ಕಾಗದ ಮಿತ ಬಳಕೆಗೆ ಆಜ್ಞೆ; ಬಿಳಿ ಹಾಳೆ ತಯಾರಿಕೆ ಕಡ್ಡಾಯ
ನವದೆಹಲಿ, ಆ. 2 – ಜಾಹೀರಾತು ಅಥವಾ ಪ್ರಚಾರಪತ್ರ, ಕ್ಯಾಲೆಂಡರ್, ಡೈರಿ ಮುಂತಾದ ಸಾಮಗ್ರಿಗಳನ್ನು ದೊಡ್ಡ ಹಾಳೆಗಳ ಮೇಲೆ ಮುದ್ರಿಸುವುದನ್ನು ಸರ್ಕಾರ ನಿರ್ಬಂಧಿಸಿದೆ.
ಕಾಗದ ತಯಾರಿಕೆ ಮೇಲೂ ನಿರ್ಬಂಧಗಳನ್ನು ಹೇರಿದೆ. ಶೇ 30ರಷ್ಟು ಬಿಳಿ ಹಾಳೆ ಉತ್ಪಾದನೆ ಕಡ್ಡಾಯ ಮಾಡಲಾಗಿದೆ.
ಕ್ಯಾಲೆಂಡರುಗಳಿಗಾಗಿ ಆರ್ಟ್, ಇಮಿಟೇಷನ್ ಆರ್ಟ್ ಅಥವಾ ಕ್ರೋಮ್ ಕಾಗದ ಬಳಸುವಾಗ ಒಂದೇ ಕಡೆ ಮುದ್ರಿಸು ವಂತಿಲ್ಲ; ಎರಡು ಕಡೆ ಮುದ್ರಿಸಿದರೂ ಎಷ್ಟೇ ಹಾಳೆಗಳ ಕ್ಯಾಲೆಂಡರ್ ಆದರೂ ಮುದ್ರಿತ ಪ್ರದೇಶ ಒಟ್ಟು 2 ಸಾವಿರ ಚದರ ಸೆಂಟಿಮೀಟರ್ ಮೀರುವಂತಿಲ್ಲ. ಇನ್ನಿತರ ಕಡಿಮೆ ದರ್ಜೆ ಕಾಗದ ಬಳಸಿ ಕ್ಯಾಲೆಂಡರ್ ಮುದ್ರಿಸಿದರೆ 8,700 ಚದರ ಸೆಂಟಿಮೀಟರ್ ಸ್ಥಳ ಬಳಕೆಗೆ ಅವಕಾಶವುಂಟು.