ಭೂಸುಧಾರಣೆ ಶಾಸನದ ದಾರಿ ನಿರ್ವಿಘ್ನ
ಬೆಂಗಳೂರು, ಆಗಸ್ಟ್ 3– ಒಕ್ಕಲು ಎಬ್ಬಿಸುವ ಕೋರ್ಟ್ ಆದೇಶಗಳಿಂದ ಗೇಣಿದಾರರಿಗೆ ರಕ್ಷಣೆ ಕೊಡಲು ರಾಜ್ಯಪಾಲರು ಇಂದು ಹೊರಡಿಸಿದ ಸುಗ್ರೀವಾಜ್ಞೆ ಹಾಗೂ ಇದೀಗ ತಾನೇ ಮುಗಿದಿರುವ 172 ತಾಲ್ಲೂಕು ಭೂ ಪಂಚಾಯಿತಿಗಳ ರಚನೆಯೊಂದಿಗೆ, ಕರ್ನಾಟಕ ಭೂ ಸುಧಾರಣಾ ಶಾಸನದ ಅನುಷ್ಠಾನ ಪಥದಲ್ಲಿರುವ ವಿಘ್ನಗಳೆಲ್ಲ ನಿವಾರಣೆಯಾದಂತಾ ಗಿದೆ. ತಕ್ಷಣಕ್ಕೆ ಜಾರಿಗೆ ಬಂದಿರುವ ಸುಗ್ರೀವಾಜ್ಞೆಯ ಪ್ರಕಾರ ಗೇಣಿ ಹಕ್ಕನ್ನು ಪಡೆದಿರುವ ಯಾವನೇ ಗೇಣಿದಾರನನ್ನು ಒಕ್ಕಲೆಬ್ಬಿಸುವಂತೆ ಯಾವುದೇ ನ್ಯಾಯಾಲಯ ಆದೇಶ ನೀಡುವಂತಿಲ್ಲ.