ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ 24–9–1971

Last Updated 23 ಸೆಪ್ಟೆಂಬರ್ 2021, 20:30 IST
ಅಕ್ಷರ ಗಾತ್ರ

ಎಚ್‌ಎಎಲ್‌ ನೌಕರರಿಗೆ 1 ಕೋಟಿ ರೂಪಾಯಿ ಬೋನಸ್ ಬಾಕಿ ಪಾವತಿ
ಬೆಂಗಳೂರು, ಸೆ. 23–
ಬೋನಸ್‌ ಪ್ರಶ್ನೆಯು ಒಪ್ಪಂದದ ಮೂಲಕ ಇತ್ಯರ್ಥವಾದ ಕಾರಣ ಎಚ್‌ಎಎಲ್‌ನ ಬೆಂಗಳೂರು ವಿಭಾಗದ ಸುಮಾರು 20,000 ಮಂದಿ ನೌಕರರು ಸುಮಾರು 1 ಕೋಟಿ ರೂಪಾಯಿ ಹಣವನ್ನು ಬಾಕಿ ರೂಪದಲ್ಲಿ ಪಡೆಯಲಿದ್ದಾರೆ.

ಶಾಸನದ ರೀತ್ಯ ಕೊಡಬೇಕಾಗಿರುವ ಬೋನಸ್‌ ಹಾಗೂ 1958ರ ಸೂತ್ರದ ಅನುಸಾರ ಉತ್ಪತ್ತಿ ಬೋನಸ್‌ ಪಾವತಿ–ಈ ಆಧಾರಗಳ ಮೇಲೆ ಎಚ್‌ಎಎಲ್‌ಆಡಳಿತ ಹಾಗೂ ನೌಕರರ ಸಂಘ ಒಂದು ಒಪ್ಪಂದಕ್ಕೆ ಬಂದಿವೆ.

ಪುಸ್ತಕ ಪ್ರಕಟಣೆ, ಪ್ರಾದೇಶಿಕ ಭಾಷಾಭಿವೃದ್ಧಿಗೆ ರಾಜ್ಯಗಳಿಗೆ ಕೇಂದ್ರದ ನೆರವಿನ ಆಶ್ವಾಸನೆ
ಮದ್ರಾಸ್‌, ಸೆ. 23–
ಪುಸ್ತಕ ಪ್ರಕಟಣೆ ಕಾರ್ಯಕ್ರಮಕ್ಕೆ ಮತ್ತು ಉನ್ನತ ಶಿಕ್ಷಣ ಹಂತಗಳಲ್ಲಿ ಶಿಕ್ಷಣ ಮಾಧ್ಯಮವಾಗಿ ಪ್ರಾದೇಶಿಕ ಭಾಷೆ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರಗಳಿಗೆ ಕೇಂದ್ರವು ಗಣನೀಯ ಪ್ರಮಾಣದಲ್ಲಿ ಆರ್ಥಿಕ ನೆರವು ನೀಡುವುದಾಗಿ ಕೇಂದ್ರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಖಾತೆ ಉಪ ಸಚಿವ ಡಿ.ಪಿ. ಯಾದವ್‌ ಇಂದು ಆಶ್ವಾಸನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT