ಬುಧವಾರ, ಡಿಸೆಂಬರ್ 8, 2021
26 °C

50 ವರ್ಷಗಳ ಹಿಂದೆ: ಶುಕ್ರವಾರ, ಅಕ್ಟೋಬರ್ 29, 1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಂಗ್ಲಾ ಸಮಸ್ಯೆ ಕುರಿತು ಭಾರತದ ನಿಲುವು ಬದಲು
ನವದೆಹಲಿ, ಅ. 28–
ಭಾರತ– ರಷ್ಯಾ ಮೈತ್ರಿ ಒಪ್ಪಂದದ ಬಳಿಕ ಭಾರತವು ಬಾಂಗ್ಲಾದೇಶ ಸಮಸ್ಯೆ ಕುರಿತ ತನ್ನ ನಿಲುವನ್ನು ಬದಲಾಯಿಸಿ ದೆಯೆಂದು ಇಂದು ವಿದೇಶಾಂಗ ವ್ಯವಹಾರ ಶಾಖೆಯ ಸಂಸತ್ ಸಲಹಾ ಸಮಿತಿ ಸಭೆಯಲ್ಲಿ ಅನೇಕ ಸದಸ್ಯರು ಆಪಾದಿಸಿದರು.

ಆದರೆ, ವಿದೇಶಾಂಗ ಸಚಿವ ಸ್ವರಣ್ ಸಿಂಗ್ ಅವರು ಈ ಆರೋಪವನ್ನು ಅಲ್ಲಗಳೆದರು.

*

ಬ್ರಿಟನ್ನಿನ ಪ್ರಥಮ ಉಪಗ್ರಹ ಪ್ರಯೋಗ
ಲಂಡನ್, ಅ. 28–
ಪ್ಯಾಸ್ಟೆರೊ– ಬ್ರಿಟಿಷ್ ರಾಕೆಟ್‌ನಿಂದ ಹಾರಿಸಲಾದ ಪ್ರಥಮ ಬ್ರಿಟಿಷ್ ಉಪಗ್ರಹ ಇಂದು ಯಶಸ್ವಿಯಾಗಿ ಕಕ್ಷಾ ಪಥ ವನ್ನು ಸೇರಿತು ಎಂದು ವಾಣಿಜ್ಯ ಮತ್ತು ಉದ್ಯಮ ಇಲಾಖೆ ಪ್ರಕಟಿಸಿದೆ.

*

ರೇಷ್ಮೆ ನೇಕಾರರಿಗೆ ನೆರವು ನೀಡಲು ಕಾರ್ಪೊರೇಷನ್: ಕೇಂದ್ರ ಮಂಡಳಿ ಯೋಜನೆ
ಮುಂಬಯಿ, ಅ. 28–
ರೇಷ್ಮೆ ಕೈಗಾರಿಕೆಗೆ ಸಹಾಯ ಮಾಡುವ ಸಲುವಾಗಿ ಒಂದು ಕೋಟಿ ರೂ. ವೆಚ್ಚದಲ್ಲಿ ಕಾರ್ಪೊರೇಷನ್ ಒಂದನ್ನು ಸ್ಥಾಪಿಸಲು ಕೇಂದ್ರ ರೇಷ್ಮೆ ಮಂಡಳಿ ಉದ್ದೇಶಿಸಿದೆಯೆಂದು ಮಂಡಳಿ ಅಧ್ಯಕ್ಷ
ಡಿ. ದೇವರಾಜ ಅರಸು ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಈ ಉದ್ದೇಶಿತ ಕಾರ್ಪೊರೇಷನ್ ಉತ್ಪಾದಕರಿಗೆ ಅಗತ್ಯವಾದ ಕಚ್ಚಾ ವಸ್ತುಗಳನ್ನು ಸರಬರಾಜು ಮಾಡುವುದು ಮತ್ತು ಸಿದ್ಧಪಡಿಸಿದ ಉತ್ಪನ್ನಗಳನ್ನು ಖರೀದಿ ಮಾಡುವುದೆಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು