ಶನಿವಾರ, ಮಾರ್ಚ್ 6, 2021
32 °C

50 ವರ್ಷಗಳ ಹಿಂದೆ: ಬುಧವಾರ, 20–1–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಲ ಸಚಿವರು, ಶಾಸಕರ ಪಕ್ಷಾಂತರ ಸನ್ನಿಹಿತ?

ಬೆಂಗಳೂರು, ಜ. 19– ಜನವರಿ ತಿಂಗಳ ಅಂತ್ಯದೊಳಗೆ ಸಂಸ್ಥಾಕಾಂಗ್ರೆಸ್ಸಿನ ಕೆಲ ಶಾಸಕರು ಹಾಗೂ ಕೆಲ ಸಚಿವರು ಆಡಳಿತ ಕಾಂಗ್ರೆಸ್ಸಿಗೆಸೇರುವ ಸಾಧ್ಯತೆ ಇದೆ ಎಂಬ ಮಾತು ರಾಜಕೀಯ ವಲಯದಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ.

ಮುರಾರಜಿ ಆಸ್ತಿಯೆಲ್ಲ ವಿದ್ಯಾಪೀಠಕ್ಕೆ

ಸೂರತ್‌, ಜ. 19– ‘ನನಗೆ ಈಗ ಒಂದು ಚೂರು ಆಸ್ತಿಯೂ ಇಲ್ಲ. ಒಂದು ಮನೆ ಸಹ ಇಲ್ಲ’ ಎಂದು ಸಂಸ್ಥಾ ಕಾಂಗ್ರೆಸ್‌ ನಾಯಕ ಮುರಾರಜಿ ದೇಸಾಯಿಯವರು ಸೋಮವಾರ ಇಲ್ಲಿ ತಿಳಿಸಿದರು.

ಚುನಾವಣೆ ಸಭೆಯೊಂದರಲ್ಲಿ ಮಾತನಾಡಿದ ಅವರು, ತಮ್ಮ ಆಸ್ತಿ ಎಲ್ಲ ಗುಜುರಾತ್‌ ವಿದ್ಯಾಪೀಠಕ್ಕೆ ಸೇರುವಂತೆ ತಾವು  ಉಯಿಲು ಮಾಡಿರುವುದಾಗಿ ಹೇಳಿದರು.

‘ನನ್ನ ಮಗನೂ ನನ್ನಂತೆಯೇ ಸರಳ ಜೀವನ ನಡೆಸಬೇಕೆಂದು ನೀವು ನಿರೀಕ್ಷಿಸಲಾಗದು. ಆದರೆ, ಆತನ ವಿರುದ್ಧ ಮಾಡಲಾದ ಆಪಾದನೆಗಳೆಲ್ಲ ನಿರಾಧಾರವಾದವು ಎಂದು ಸಾಬೀತಾಗಿದೆ’ ಎಂದು ಅವರು
ಹೇಳಿದರು.

ಅವಿಭಜಿತ ಕಾಂಗ್ರೆಸ್ಸಿನ ಸಮಾಜವಾದಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಪ್ರತಿಗಾಮಿ ಶಕ್ತಿಗಳು ಆಡಚಣೆಯೊಡ್ಡಿದ್ದವೆಂಬ ಶ್ರೀಮತಿ ಇಂದಿರಾ ಗಾಂಧಿಯವರ ಆಪಾದನೆಯನ್ನು ಅವರು ತಿರಸ್ಕರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು