ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಬುಧವಾರ 17.11.1971

Last Updated 16 ನವೆಂಬರ್ 2021, 15:22 IST
ಅಕ್ಷರ ಗಾತ್ರ

ಬೆಲೆ ಏರಿಕೆ ತಡೆಯದೆ ವೈಫಲ್ಯ: ವಿರೋಧಿಗಳಿಂದ ಸರ್ಕಾರಕ್ಕೆ ತರಾಟೆ

ನವದೆಹಲಿ, ನ. 16– ಶ್ರೀ ಸಾಮಾನ್ಯನಿಗೆ ಹೊರಲಾಗದ ಹೊರೆಯಾಗಿರುವಂತಹ ಅಗತ್ಯ ವಸ್ತುಗಳ ಏರುತ್ತಿರುವ ಬೆಲೆಗಳ ಬಗ್ಗೆ ಲೋಕಸಭೆಯಲ್ಲಿ ಇಂದು ವಿರೋಧ ಪಕ್ಷಗಳು ಸರ್ಕಾರಕ್ಕೆ ಬಹುವಾಗಿ ಪ್ರಶ್ನೆ ಹಾಕಿ ಹಿಂಸೆಗೆ ಗುರಿಪಡಿಸಿದವು.

ಅಟಲ ಬಿಹಾರಿ ವಾಜಪೇಯಿ (ಜನ ಸಂಘ) ಮತ್ತು ಇತರ ನಾಲ್ವರು ಮಂಡಿಸಿದ ಗಮನ ಸೆಳೆಯುವ ಸೂಚನೆಯೊಂದರ ಮೂಲಕ ಸದಸ್ಯರು ವ್ಯಕ್ತಪಡಿಸಿದ ಕಳವಳ ದಲ್ಲಿ ಸರ್ಕಾರ ಪಾಲ್ಗೊಂಡಿತಲ್ಲದೆ, ಸರ್ಕಾರ ಕೈಗೊಂಡ ಅಲ್ಪಾವಧಿಯ ಹಾಗೂ ದೀರ್ಘಾವಧಿಯ ಕ್ರಮಗಳು ಮುಂಬರುವ ತಿಂಗಳುಗಳಲ್ಲಿ ಬೆಲೆ ಮಟ್ಟದ ಮೇಲೆ ಸ್ಪಷ್ಟ ವಾಗಿ ಗೋಚರಿಸುವಂತೆ ಪರಿಣಾಮ ಉಂಟು ಮಾಡುವುವೆಂದು ಅರ್ಥ ಸಚಿವ
ಶ್ರೀ ವೈ.ಬಿ. ಚವಾಣ್‌ ಅವರು ಆಶಿಸಿದರು.

ಸಂವಿಧಾನಕ್ಕೆ ಅಪಮಾನ: ಶಿಕ್ಷಾರ್ಹ ಅಪರಾಧವೆಂದು ಘೋಷಿಸಲು ಶಿಫಾರಸು

ನವದೆಹಲಿ, ನ. 16– ರಾಷ್ಟ್ರ ಧ್ವಜ, ಸಂವಿಧಾನ ಗ್ರಂಥ, ರಾಷ್ಟ್ರ ಲಾಂಛನ ಮತ್ತು ರಾಷ್ಟ್ರಗೀತೆ ಇವುಗಳನ್ನು –ದಹನ ಮಾಡುವುದು, ಅಪವಿತ್ರಗೊಳಿಸುವುದು ಅಥವಾ ಬೇರೆ ಯಾವುದೇ ರೀತಿಯಲ್ಲಿ ಉದ್ದೇಶಪೂರ್ವಕವಾಗಿ ಅಪಮಾನ ಗೊಳಿಸು ವುದನ್ನು ಭಾರತೀಯ ಪೀನಲ್ ಕೋಡಿನ ಅನ್ವಯ ಶಿಕ್ಷಾರ್ಹ ಅಪರಾಧವೆಂದು ಘೋಷಿ ಸುವಂತೆ ಕಾನೂನು ಆಯೋಗ ಶಿಫಾರಸು ಮಾಡಿದೆ.

ಭಾರತದ ಶತ್ರುಗಳಿಗೆ ಯಾವುದೇ ವಿಧ ದಲ್ಲಿ ಸಹಾಯ–ಸಹಕಾರ ನೀಡುವುದನ್ನು ನಿರ್ದಿಷ್ಟ ಅಪರಾಧವೆಂದು ಸೇರಿಸುವುದಕ್ಕಾಗಿ ಪೀನಲ್ ಕೋಡ್ ಅನ್ನು ಪರಿಷ್ಕರಿಸುವಂತೆ ಆಯೋಗ ತನ್ನ ನಲವತ್ತೆರಡನೆ ವರದಿಯಲ್ಲಿ ಸಲಹೆ ಮಾಡಿದೆ.

ಆಯೋಗದ ಈ ವರದಿಯನ್ನು ಇಂದು ಲೋಕಸಭೆ ಮುಂದೆ ಮಂಡಿಸಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT