ಬುಧವಾರ, ಮೇ 18, 2022
24 °C

50 ವರ್ಷಗಳ ಹಿಂದೆ: ಶನಿವಾರ 15–4–1972

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಟರಿ ಯೋಜನೆ ಕೂಡಲೆ ರದ್ದುಗೊಳಿಸಬೇಕೆಂದು ವಿಧಾನ ಪರಿಷತ್ತಿನಲ್ಲಿ ಒತ್ತಾಯ

ಬೆಂಗಳೂರು, ಏ– 14– ಸಮಾಜದ ನೈತಿಕ ಮೌಲ್ಯದ ಅದಃಪತನಕ್ಕೆ ಕಾರಣವಾಗಿರುವ ಲಾಟರಿ ಯೋಜನೆಯನ್ನು ಕೂಡಲೇ ರದ್ದುಗೊಳಿಸಬೇಕೆಂದು ಇಂದು ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಬಹುಮಂದಿ ಸದಸ್ಯರು ಸರ್ಕಾರವನ್ನು ಒತ್ತಾಯಪಡಿಸಿದರು.

ಅರಸುಗೆ ವೀರೇಂದ್ರರ ಉಡುಗೊರೆ

ನವದೆಹಲಿ, ಏ. 14– ರಾಜ್ಯದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರು ತಮ್ಮ ಉತ್ತರಾಧಿಕಾರಿಯಾದ ಈಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಒಮೇಗಾ ಕೈಗಡಿಯಾರವೊಂದನ್ನು ಇಂದು ಇಲ್ಲಿನ ಮೈಸೂರು ಭವನದಲ್ಲಿ ಉಡುಗೊರೆ ಇತ್ತರು.

ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿ ನಿವೃತ್ತರಾದಾಗ 1968ರಲ್ಲಿ ಅವರ
ಉತ್ತರಾಧಿಕಾರಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಬಂದ ವೀರೇಂದ್ರ ಪಾಟೀಲರಿಗೆ ಈ ಕೈಗಡಿಯಾರವನ್ನು ನಿಜಲಿಂಗಪ್ಪನವರು
ಕೊಟ್ಟಿದ್ದರು.

ಪಾಟೀಲರು ಈ ಗಡಿಯಾರವನ್ನು ತಮ್ಮ ಉತ್ತರಾಧಿಕಾರಿಗೆ ನೀಡಬೇಕೆಂಬುದು ನಿಜಲಿಂಗಪ್ಪ ಅವರ ಅಪೇಕ್ಷೆಯಾಗಿತ್ತು.

ಅರಸು ಅವರೂ ಸಹ ಈ ಕೈಗಡಿಯಾರವನ್ನು ತಮ್ಮ ಉತ್ತರಾಧಿಕಾರಿಗೆ ನೀಡುವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು