ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಬುಧವಾರ 25.4.1972

Last Updated 25 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಬಂಧ ಪಾಲನೆ ಸಂವಿಧಾನ ನಮ್ಮದು– ಪಂತ್

ಬೆಂಗಳೂರು, ಏ. 25– ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ ಪಾಲನೆಯ ಅವಶ್ಯಕತೆಗಳನ್ನು ಪೂರೈಸುವಷ್ಟರ ಮಟ್ಟಿಗೆ ಭಾರತದ ಸಂವಿಧಾನ ಸಾಮರ್ಥ್ಯ ಗುಣ ಗಳಿಂದ ಕೂಡಿದೆ ಎಂಬ ಆಡಳಿತ ಸುಧಾರಣಾ ಆಯೋಗದ ಅಭಿಪ್ರಾಯವನ್ನು ಕಳೆದ 22 ವರ್ಷಗಳ ಅನುಭವ ಸಾಧಿಸಿ ತೋರಿಸಿದೆ ಎಂದು ಕೇಂದ್ರ ಗೃಹ ಇಲಾಖೆ ರಾಜ್ಯ ಮಂತ್ರಿ ಶ್ರೀ ಕೆ.ಸಿ. ಪಂತ್ ಇಂದು ಇಲ್ಲಿ ಹೇಳಿದರು.

ಕೇಂದ್ರ ಮತ್ತು ತಮಿಳುನಾಡುಗಳ ನಡುವಿನ ಸಂಬಂಧವನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಕೇಂದ್ರ ರಾಜ್ಯಗಳ ಸಂಬಂಧದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಶ್ರೀ ಪಂತ್ ಅವರು, ‘ರಾಜ್ಯಗಳ ನಡುವೆ ತಿಕ್ಕಾಟ ಉದ್ಭವಿಸಲು ಅವಕಾಶ ಕೊಡಬಾರದು, ಹಿಂದೆ ರಾಜ್ಯಗಳಲ್ಲಿ ವಿರೋಧಪಕ್ಷಗಳ ಸರ್ಕಾರವಿದ್ದಾಗಲೂ, ಯಾವುದೇ ಗಂಭೀರ ತೊಂದರೆಗಳು
ಉದ್ಭವಿಸಿರಲಿಲ್ಲ’ ಎಂದರು.

ವಿಶ್ವಾಸವಿಟ್ಟಿರುವ ಜನತೆಗೆ ದ್ರೋಹ ಬಗೆಯುವ ಭಯ ವೀರೇಂದ್ರರಿಗೆ ಬೇಡ
– ಮುಖ್ಯಮಂತ್ರಿ ಅರಸು

ಬೆಂಗಳೂರು, ಏ. 25– ‘ಜನತೆ ನನ್ನಲ್ಲಿಟ್ಟಿರುವ ವಿಶ್ವಾಸಕ್ಕೆ ದ್ರೋಹ ಬಗೆಯುತ್ತೇನೆಂಬ ಭಯ ಶ್ರೀ ವೀರೇಂದ್ರ ಪಾಟೀಲರಿಗೆ ಬೇಡ’ ಎಂದು ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರು ಸ್ಪಷ್ಟಪಡಿಸಿದ್ದಾರೆ.

ಕೃಷ್ಣಾ ನೀರು ಹಂಚಿಕೆ ವಿವಾದವನ್ನು ಸಂಧಾನದ ಮೂಲಕ ಇತ್ಯರ್ಥಮಾಡುವು
ದನ್ನು ವಿರೋಧಿಸಿ ಪಾಟೀಲರು ಹೇಳಿದ ಮಾತುಗಳಿಗೆ ಉತ್ತರಿಸಿರುವ ಮುಖ್ಯಮಂತ್ರಿ, ಈ ಕ್ಲಿಷ್ಟ ಸಮಸ್ಯೆಯ ಬಗ್ಗೆ ಪಾಟೀಲರು ವಿವಾದ ಎಬ್ಬಿಸಬಾರದಾಗಿತ್ತು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT