ಐದನೇ ರಾಷ್ಟ್ರಪತಿಯಾಗಿ ಫಕ್ರುದ್ದೀನ್ ಅಲಿ ಅಹ್ಮದ್ ಅಧಿಕಾರ ಸ್ವೀಕಾರ
ನವದೆಹಲಿ, ಆ. 24– ಯಾವುದೇ ಬಗೆಯ ಜಾತಿ, ಮತ, ವರ್ಣ, ವರ್ಗ ಭೇದಗಳಿಲ್ಲದೆ, ಜನತೆಗೆ ಸೇವೆ ಸಲ್ಲಿಸುವ ಪ್ರಮಾಣ ವಚನದೊಂದಿಗೆ ಫಕ್ರುದ್ದೀನ್ ಅಲಿ ಅಹ್ಮದ್ ಇಂದು ಭಾರತದ ಐದನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದರು.
ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ಬೆಳಿಗ್ಗೆ ನಡೆದ ಸರಳ ಸಮಾರಂಭದಲ್ಲಿ ಅಸ್ಸಾಮಿನ 69 ವರ್ಷ ವಯಸ್ಸಿನ ಹಿರಿಯ ರಾಜಕಾರಣಿ ಅಹ್ಮದ್ ಅವರು ಪ್ರಮಾಣ ವಚನವನ್ನು ಸ್ವೀಕರಿಸಿದರು.
ಅಹ್ಮದ್ ಭಾರತ ಗಣ ರಾಜ್ಯದ ಎರಡನೇ ಮುಸ್ಲಿಂ ರಾಷ್ಟ್ರಪತಿ.