ಬುಧವಾರ, ಏಪ್ರಿಲ್ 14, 2021
31 °C

50 ವರ್ಷಗಳ ಹಿಂದೆ: ಶನಿವಾರ 20–3–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

50 ವರ್ಷಗಳ ಹಿಂದೆ

ಪಕ್ಷದಲ್ಲಿ ನಿಷ್ಠೆ ವ್ಯಕ್ತಪಡಿಸಿದವರಿಗೆ ಮಾತ್ರ ಪ್ರವೇಶ

ಬೆಂಗಳೂರು, ಮಾರ್ಚ್ 19–ಪಕ್ಷದ ಕಾರ್ಯಕ್ರಮದಲ್ಲಿ ನಿಷ್ಠೆ ವ್ಯಕ್ತಪಡಿಸದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲವೆಂದು ಆಡಳಿತ ಕಾಂಗ್ರೆಸ್ ಪಕ್ಷದ ನಾಯಕ ಶ್ರೀ ಎಚ್. ಸಿದ್ದವೀರಪ್ಪ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.

ಈಗ ಪಕ್ಷಕ್ಕೆ ಸೇರಿರುವವರೆಲ್ಲ ಸ್ವಂತ ಇಚ್ಛೆಯಿಂದ ಸೇರಿದ್ದಾರೆಂದೂ ಹೇಳಿದರು.

‘ಷರತ್ತುಗಳೊಡೆನೆ ಹಾಗೂ ಪೂರ್ಣ ಮನಸ್ಸಿಲ್ಲದೆ ಬರುವವರನ್ನು ಸೇರಿಸಿಕೊಳ್ಳುವುದಿಲ್ಲ’ ಎಂದು ವರದಿಗಾರರಿಗೆ ತಿಳಿಸಿದರು.

ಪಕ್ಷಾಂತರಿಗಳ ಬೆಂಬಲದಿಂದ ಸರ್ಕಾರ ರಚನೆಗೆ ಘೋರ್ಪಡೆ ವಿರೋಧ: ಚುನಾವಣೆಗೆ ಆಗ್ರಹ

ಬೆಂಗಳೂರು, ಮಾರ್ಚ್ 19– ಈಚಿನವರೆಗೂ ಆಡಳಿತ ಕಾಂಗ್ರೆಸ್ಸಿನ ನೀತಿಗಳನ್ನು ವಿರೋಧಿಸುತ್ತಿದ್ದು, ಈಗ ರಾಜಕೀಯ ಲಾಭಕ್ಕಾಗಿ ಪಕ್ಷಾಂತರಗೊಂಡವರ ಸಹಾಯದಿಂದ ಮೈಸೂರಿನಲ್ಲಿ ಆಡಳಿತ ಕಾಂಗ್ರೆಸ್ ಸರ್ಕಾರ ರಚಿಸುವುದನ್ನು ಪಕ್ಷದ ಪ್ರಗತಿಶೀಲ ಪ್ರಮುಖರದಲ್ಲಿ ಒಬ್ಬರಾದ ಶ್ರೀ ಎಂ.ವೈ. ಘೋರ್ಪಡೆ ಅವರು ತೀವ್ರವಾಗಿ ವಿರೋಧಿಸಿದ್ದಾರೆ.

ಕಾಂಗ್ರೆಸ್ ಹೈಕಮಾಂಡಿನ ಪ್ರತಿನಿಧಿ ಶ್ರೀ ಉಮಾಶಂಕರ್ ದೀಕ್ಷಿತ್ ಅವರ ಸಮಕ್ಷಮದಲ್ಲಿ ಪಕ್ಷದ ರಾಜ್ಯ ಶಾಸಕರು, ಸಮಾವೇಶಗೊಂಡು, ಸರ್ಕಾರ ರಚನೆ ಮುಂತಾದ ಭಾವೀ ಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತಿರುವ ಸಂದರ್ಭದಲ್ಲಿ ಶ್ರೀ ಘೋರ್ಪಡೆ ಅವರು ವ್ಯಕ್ತಪಡಿಸಿರುವ ಅಭಿಪ್ರಾಯ ಗಮನಾರ್ಹ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು