ಶನಿವಾರ, ಜೂನ್ 25, 2022
24 °C

50 ವರ್ಷಗಳ ಹಿಂದೆ: ಶನಿವಾರ ಜೂನ್‌ 12, 1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

50 ವರ್ಷಗಳ ಹಿಂದೆ

ಗಗನಯಾನದಲ್ಲಿ ರಕ್ತಪರೀಕ್ಷೆ

ಮಾಸ್ಕೊ, ಜೂನ್ 11– ಭಾರರಾಹಿತ್ಯದಿಂದ ತಮ್ಮ ಮೂಳೆಗಳಲ್ಲಿರುವ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗಿದೆಯೇ ಎಂಬುದನ್ನು ಕಂಡು ಹಿಡಿಯಲು, ಸೋಯುಜ್–ಸಲ್ಯೂಟ್ ಅಂತರಿಕ್ಷ ಪ್ರಯೋಗಾಲಯದಲ್ಲಿರುವ ಮೂವರು ರಷ್ಯನ್ ಗಗನಯಾತ್ರಿಗಳು ಇಂದು ತಮ್ಮ ಮೇಲೆ ಪ್ರಯೋಗ ನಡೆಸಿದರು.

ಅಂತರಿಕ್ಷದಲ್ಲಿ ಕಾಯಂ ನಿಲ್ದಾಣ ನಿರ್ಮಿಸಲು ಅಡ್ಡಿಯಾಗಿರುವ ಸಮಸ್ಯೆಗಳ ಲ್ಲೊಂದಾದ ಭಾರರಾಹಿತ್ಯ ಕುರಿತು ಕೂಲಂಕಷ ಅಧ್ಯಯನ ಈ ಯಾನದಲ್ಲಿ ನಡೆಯಲಿದೆ.

‘ತ್ವರಿತ ಸರ್ಕಾರಿ ಕಾರ್ಯಕ್ಕೆ ಮಾಯ ಮಾಟ ಬೇಕಿಲ್ಲ’

ಬೆಂಗಳೂರು, ಜೂನ್ 11–ಸರ್ಕಾರದ ಕೆಲವು ಕಾರ್ಯಗಳು ತ್ವರಿತವಾಗಿ ನಡೆಯಲು ಯಾವ ‘ಮಾಯಮಂತ್ರ’ವೂ ಇಲ್ಲ. ಭೂ ಸುಧಾರಣೆಗಳ ತ್ವರಿತ ಕಾರ್ಯಾಚರಣೆಗಾಗಿ ಅಧಿಕಾರಿಗಳ ಸಮಿತಿಯೊಂದನ್ನು ನೇಮಿಸಲಾಗಿದೆ ಎಂದು ರಾಜ್ಯಪಾಲ ಶ್ರೀ ಧರ್ಮವೀರ ಹೇಳಿದರು.

ವಿದ್ಯಾಕ್ಷೇತ್ರ, ಭೂಸುಧಾರಣೆಯಂಥ ವಿಷಯಗಳಲ್ಲಿ ಕೆಲವು ಬದಲಾವಣೆಗಳನ್ನು ಜನರು ನಿಮ್ಮಿಂದ ನಿರೀಕ್ಷಿಸಿದ್ದರು ಎಂದು ವರದಿಗಾರರೊಬ್ಬರು ಹೇಳಿದಾಗ ಅವರು ಹೀಗೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು