ಗುರುವಾರ , ಅಕ್ಟೋಬರ್ 21, 2021
27 °C

50 ವರ್ಷಗಳ ಹಿಂದೆ: ಮಂಗಳವಾರ 05-10-1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲ್ಬುರ್ಗಿ ಜಿಲ್ಲೆಯಲ್ಲಿ ಹಸಿವಿನಿಂದ ಜನ ಸತ್ತ ವರದಿ ‘ನಿರಾಧಾರ’

ಬೆಂಗಳೂರು, ಅ. 4– ಕಲ್ಬುರ್ಗಿ ಜಿಲ್ಲೆಯ ಅಫ್ಜಲ್‌ಪುರ ಮತ್ತು ಚಿಂಚೋಳಿ ತಾಲ್ಲೂಕಿ ನಲ್ಲಿ ಹೊಟ್ಟೆಗಿಲ್ಲದ ಜನ ಸತ್ತರೆಂದು ಕೆಲವು ಪತ್ರಿಕೆಗಳಲ್ಲಿ ಬಂದಿರುವ ವರದಿ ನಿರಾಧಾರವೆಂದು ಅಭಾವಪೀಡಿತ ಪ್ರದೇಶ ದಲ್ಲಿ ಹಸಿವಿನಿಂದ ಮರಣ ಸಂಭವಿಸಿಲ್ಲವೆಂದು ತನಿಖೆಯಿಂದ ವ್ಯಕ್ತಪಟ್ಟಿದೆಯೆಂದೂ ಸರ್ಕಾರಿ ಪ್ರಕಟಣೆಯೊಂದು ತಿಳಿಸಿದೆ.

ಎಲ್ಲ ನೌಕರಿಗಳೂ ಉದ್ಯೋಗ ಸೇವೆ ಮೂಲಕ ಆಗಲು ಆಗ್ರಹ

ಬೆಂಗಳೂರು, ಅ. 4– ಉದ್ಯೋಗವನ್ನು ಅರಸುವವರು ಮತ್ತು ಕೆಲಸಗಾರರ ಅಗತ್ಯ ವಿರುವ ಆಡಳಿತ ವರ್ಗಗಳ ನಡುವಿನ ಉಪಯುಕ್ತ ಸಾಧನವಾದ ಉದ್ಯೋಗ ಸೇವೆಗಳ ಪಾತ್ರ ಪರಿಣಾಮಕಾರಿಯಾಗಿ ಬೆಳೆಯಲು ಎಲ್ಲ ಬಗೆಯ ಉದ್ಯೋಗಗಳೂ ಅದರ ಮೂಲಕವೇ ವಿಲೇವಾರಿಯಾಗಬೇಕೆಂದು ಕಾರ್ಮಿಕ ಶಾಖೆಯ ಕಾರ್ಯದರ್ಶಿ ಶ್ರೀ ಎಂ.ಕೆ. ವೆಂಕಟೇಶನ್ ಅವರು ಇಂದು ಇಲ್ಲಿ ನುಡಿದರು.

ವಿಧಾನಸೌಧದಲ್ಲಿ ಮೈಸೂರು, ತಮಿಳು ನಾಡು, ಆಂಧ್ರ, ಪುದುಚೇರಿ, ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶದ ಉದ್ಯೋಗಾಧಿಕಾರಿಗಳ ವಲಯ ವಿಚಾರ ಸಂಕಿರಣ ವನ್ನು ಉದ್ಘಾಟಿಸಿದ ಅವರು ದುರದೃಷ್ಟದಿಂದ ಅನೇಕ ಆಡಳಿತ ವರ್ಗಗಳು ಉದ್ಯೋಗ ಸೇವೆಯನ್ನು ಕಡೆಗಣಿಸಿ ನೇರ ನೇಮಕ ಮಾಡುತ್ತಿವೆಯೆಂದು ಹೇಳಿ ಅದನ್ನು ತಪ್ಪಿಸಲು ಈ ಬಗ್ಗೆ ಕಡ್ಡಾಯ ಮಾಡುವ ಶಾಸನ ಅಗತ್ಯ ವಿದೆಯೇ ಎಂಬುದನ್ನು ಪರಿಶೀಲಿಸಬೇಕಾಗಿದೆ ಯೆಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು