ಬುಧವಾರ, ಅಕ್ಟೋಬರ್ 20, 2021
24 °C

50 ವರ್ಷಗಳ ಹಿಂದೆ: ಬುಧವಾರ 06-10-1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳಸದ ಮತಚೀಟಿಗಳನ್ನು ಇಂದು ಹಾಜರುಪಡಿಸಲು ರಾಜ್ಯ ಹೈಕೋರ್ಟ್‌ ಸೂಚನೆ

ಬೆಂಗಳೂರು, ಅ. 5– ಮೈಸೂರು ನಗರ ಕ್ಷೇತ್ರದಿಂದ ಲೋಕಸಭೆಗೆ ಜರುಗಿದ ಚುನಾವಣೆಯಲ್ಲಿ ಉಪಯೋಗಿಸದಿದ್ದ ಮತ ಚೀಟಿಗಳನ್ನು ಬುಧವಾರ ಬೆಳಿಗ್ಗೆ 11 ಗಂಟೆಯೊಳಗೆ ನ್ಯಾಯಾಲಯದಲ್ಲಿ ಹಾಜರು ಪಡಿಸಬೇಕೆಂದು ಮೈಸೂರು ಹೈಕೋರ್ಟಿನ ನ್ಯಾಯಮೂರ್ತಿ ಇ.ಎಸ್‌. ವೆಂಕಟರಾಮಯ್ಯ ಅವರು ಇಂದು ಆದೇಶ ನೀಡಿದರು.

ಧಾರವಾಡ ಉತ್ತರ, ಮೈಸೂರು ನಗರ, ಚಾಮರಾಜನಗರ, ಕೊಪ್ಪಳ ಮತ್ತು ಬಾಗಲಕೋಟೆ ಕ್ಷೇತ್ರಗಳಿಂದ ಈಚೆಗೆ ಲೋಕಸಭೆಗೆ ಜರುಗಿದ ಚುನಾವಣೆಗಳನ್ನು ಪ್ರಶ್ನಿಸಿ ಸಲ್ಲಿಸಿದ ರಿಟ್‌ ಅರ್ಜಿಗಳ ವಿಚಾರಣೆ ಹೈಕೋರ್ಟಿನಲ್ಲಿ ನಡೆಯಿತು.

ಪಂಜಾಬ್‌ ಕಾಂಗ್ರೆಸ್‌ ಬಿಕ್ಕಟ್ಟು ಅಂತ್ಯ

ನವದೆಹಲಿ, ಅ. 5– ಪಂಜಾಬ್‌ ಆಡಳಿತ ಕಾಂಗ್ರೆಸ್ಸಿನ ಎರಡು ಗುಂಪುಗಳು ಭಿನ್ನಾಭಿಪ್ರಾಯ ಮರೆತು ಬರುವ
ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷದ ಯಶಸ್ಸಿಗಾಗಿ ಶ್ರಮಿಸಲು ಇಂದು ಸಮ್ಮಿತಿಸಿದವು.

ಪಂಜಾಬ್‌ ಆಡಳಿತ ಕಾಂಗ್ರೆಸ್ಸಿನ ಹಿರಿಯ ನಾಯಕರು ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಜೊತೆ ದೀರ್ಘ ಮಾತುಕತೆ ನಡೆಸಿದ ಬಳಿಕ ಈ ಒಮ್ಮತಕ್ಕೆ ಬರಲಾಯಿತು. ಪಂಜಾಬಿನ ನಾಯಕರು ಉಮಾಶಂಕರ ದೀಕ್ಷಿತ್, ಡಾ. ಶಂಕರದಯಾಳ್‌ ಶರ್ಮಾ ಮತ್ತು ಚಂದ್ರಜಿತ್‌ಯಾದವ್‌ ಅವರೊಡನೆಯೂ ಮಾತುಕತೆ ನಡೆಸಿದರು.

ಎರಡು ಗುಂಪಿನ ಕಾಂಗ್ರೆಸ್ಸಿಗರೂ ತಮ್ಮ ಭಿನ್ನಾಭಿಪ್ರಾಯದ ಕಾರಣಗಳನ್ನು ಮಾತುಕತೆ ಕಾಲದಲ್ಲಿ ದೆಹಲಿ ವರಿಷ್ಠರಿಗೆ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು