ನೀರು ಹಂಚಿಕೆಗಾಗಿ ಕಾವೇರಿ ಪ್ರಾಧಿಕಾರ ರಚನೆಗೆ ಮುಖ್ಯಮಂತ್ರಿಗಳ ಒಪ್ಪಿಗೆ

ನವದೆಹಲಿ, ನ. 29– ಮೂರು ರಾಜ್ಯಗಳಿಗೂ ಕಾವೇರಿ ನೀರಿನ ಸಮರ್ಪಕ ಹಂಚಿಕೆಗಾಗಿ ‘ಕಾವೇರಿ ಕಣಿವೆ ಪ್ರಾಧಿಕಾರ’ ರಚಿಸಲು ತಮಿಳುನಾಡು, ಕರ್ನಾಟಕ ಹಾಗೂ ಕೇರಳದ ಮುಖ್ಯಮಂತ್ರಿಗಳು ಇಂದು ಇಲ್ಲಿ ಒಪ್ಪಿಗೆ ನೀಡಿದರು.

ಕೇಂದ್ರ ಕೃಷಿ ಹಾಗೂ ನೀರಾವರಿ ಸಚಿವ ಜಗಜೀವನ್ ರಾಂ ಅಧ್ಯಕ್ಷತೆಯಲ್ಲಿ ಐದು ತಾಸು ನಡೆದ ಸಭೆಯಲ್ಲಿ ಈ ಒಪ್ಪಂದವಾಗಿದೆ.

ಪ್ರಾಧಿಕಾರ ರಚನೆಯ ನಿರ್ಧಾರವು ಐತಿಹಾಸಿಕ ಮೈಲಿಗಲ್ಲು ಎಂದು ಬಣ್ಣಿಸಿದ ಜಗಜೀವನ್ ರಾಂ, ಈ ಒಪ್ಪಂದವು ಇತರ ಅಂತರರಾಜ್ಯ ನದಿ ನೀರಿನ ವಿವಾದಗಳನ್ನು ಪರಿಹರಿಸಲು ಮಾದರಿಯಾಗಲಿದೆ ಎಂದರು.

ಕೇಂದ್ರ ಸರ್ಕಾರದ ಪ್ರತಿನಿಧಿಯೊಬ್ಬರು ಪ್ರಾಧಿಕಾರದ ಅಧ್ಯಕ್ಷರಾಗಿದ್ದರೆ, ಮೂರು ರಾಜ್ಯಗಳ ತಾಂತ್ರಿಕ ಪರಿಣತರು ಸದಸ್ಯರಾಗಿಇರಲಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.