50 ವರ್ಷಗಳ ಹಿಂದೆ: ಮಂಗಳವಾರ, 15–12–1970

ಸರ್ಕಾರಿ ಕ್ಷೇತ್ರದಲ್ಲಿ ಅಗತ್ಯ ವಸ್ತುಗಳ ತಯಾರಿಕೆ ನಿರ್ಧಾರ
ನವದೆಹಲಿ, ಡಿ. 14– ಮಕ್ಕಳ ಆಹಾರ, ಟೈರು–ಟ್ಯೂಬ್, ಎಲೆಕ್ಟ್ರಿಕ್ ಫ್ಯಾನ್, ಸ್ವಿಚ್‌ಗೇರ್ ಮುಂತಾದ ಬಳಕೆದಾರರ ಅಗತ್ಯ ವಸ್ತುಗಳನ್ನು ಸರ್ಕಾರಿ ಕ್ಷೇತ್ರದಲ್ಲಿ ಉತ್ಪಾದಿಸುವ ಉದ್ದೇಶವನ್ನು ಕೈಗಾರಿಕಾಭಿವೃದ್ಧಿ ಉಪಸಚಿವ ಎಂ.ಆರ್.ಕೃಷ್ಣ ಅವರು ಇಂದು ರಾಜ್ಯಸಭೆಯಲ್ಲಿ ಪ್ರಕಟಿಸಿದರು.
ಈ ಬಗ್ಗೆ ತಾಂತ್ರಿಕ– ಆರ್ಥಿಕ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸುತ್ತಿರುವುದಾಗಿಯೂ ತಿಳಿಸಿದರು. ಯೋಜನೆಗಳ ಗಾತ್ರ ಮತ್ತು ಪ್ರಮಾಣ, ಅಗತ್ಯ ಯಂತ್ರ ಸಾಮಗ್ರಿ ಮುಂತಾದ ಅಂಶಗಳನ್ನು ಪರಿಗಣಿಸಿ ಸಾರ್ವಜನಿಕರಿಂದ ಷೇರು ಬಂಡವಾಳ ಎತ್ತುವುದಾಗಿ ಅವರು ತಿಳಿಸಿದರು.
ಸಚಿವ ಘೋಷ್ ಪುತ್ರನಿಗೆ ಚೂರಿ
ಕಲ್ಕತ್ತ, ಡಿ. 14– ಕೇಂದ್ರ ಆರೋಗ್ಯ ಮತ್ತು ವಸತಿ ಖಾತೆಯ ಸ್ಟೇಟ್ ಸಚಿವ ಪರಿಮಳ್ ಘೋಷ್‌ರ ನಿವಾಸಕ್ಕೆ ಇಂದು ಬೆಳಿಗ್ಗೆ ನಾಲ್ಕು ಮಂದಿ ನಕ್ಸಲೀಯರು ನುಗ್ಗಿ, ಅವರ ಪತ್ನಿ ಮತ್ತು ಪುತ್ರನನ್ನು ಇರಿದರು.
ಕಾಗದ ಕಾರ್ಖಾನೆ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಸಚಿವರ ಪುತ್ರ ದೀಪ್ತಿಮಾನ್ ಘೋಷ್‌ರಿಗೆ ತೀವ್ರ ಗಾಯಗಳಾಗಿವೆ. ಸಚಿವರ ಪತ್ನಿಗೆ ತೋಳಿನ ಮೇಲೆ ಮಾತ್ರ ಸ್ವಲ್ಪ ಗಾಯವಾಯಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.