50 ವರ್ಷಗಳ ಹಿಂದೆ: ಶನಿವಾರ, 2 –1–1971

ಎಸ್.ಎಂ. ಕೃಷ್ಣ, ಲಕ್ಕಪ್ಪ, ಹುಚ್ಚೇಗೌಡ ಆಡಳಿತ ಕಾಂಗ್ರೆಸ್‌ಗೆ
ಬೆಂಗಳೂರು, ಜ. 1– ಏಕ ಧ್ವಜದಡಿಯಲ್ಲಿ ಪ್ರಜಾಸತ್ತಾತ್ಮಕ ಸಮಾಜವಾದದ ಸಂಘಟನೆಗಾಗಿ ವಿಸರ್ಜಿತ ಸಂಸತ್ತಿನ ರಾಜ್ಯ ಪಿ.ಎಸ್.ಪಿ. ಸದಸ್ಯರಾದ ಸರ್ವಶ್ರೀ ಎಸ್.ಎಂ.ಕೃಷ್ಣ, ಕೆ.ಲಕ್ಕಪ್ಪ ಹಾಗೂ ಎಂ.ಹುಚ್ಚೇಗೌಡ, ವಿಧಾನಸಭೆಯಪಿ.ಎಸ್.ಪಿ. ಸದಸ್ಯರಾದ ಕೆ.ಎಚ್.ರಂಗನಾಥ್, ಸಿ.ಕೆ.ರಾಜಯ್ಯಶೆಟ್ಟಿ, ಪಿ.ಎಲ್.ಶಿವಪ್ಪ ಹಾಗೂ ಸಿ.ಎಂ.ಎಸ್. ಶಾಸ್ತ್ರಿ ಪಿ.ಎಸ್.ಪಿ.ಗೆ ರಾಜೀನಾಮೆಯಿತ್ತು ಆಡಳಿತ ಕಾಂಗ್ರೆಸ್ಸಿಗೆ ಸೇರಲಿದ್ದಾರೆ.
ಕಾವೇರಿ ಜಲ ವಿವಾದ: ತ್ವರಿತ ಕ್ರಮಕ್ಕೆ ಕರುಣಾನಿಧಿ ಒತ್ತಾಯ
ಮದರಾಸ್, ಜ. 1– ಕಾವೇರಿ ವಿವಾದದ ವಿಷಯದಲ್ಲಿ ಕೇಂದ್ರ ‘ಜಡ’ ಸ್ವಭಾವ ತಾಳಿರುವುದನ್ನು ಪ್ರಧಾನಿ ಇಂದಿರಾ ಗಾಂಧಿ ಅವರ ಗಮನಕ್ಕೆ ತಾವು ತಂದುದಾಗಿ ತಮಿಳುನಾಡು ಮುಖ್ಯಮಂತ್ರಿ ಶ್ರೀ ಎಂ.ಕರುಣಾನಿಧಿ ಅವರು ಇಂದು ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಈ ಜಲ ವಿವಾದವನ್ನು ಆದಷ್ಟು ಶೀಘ್ರವೇ ಪಂಚಾಯಿತಿಗೆ ಒಪ್ಪಿಸುವುದಕ್ಕೆ ತಮಿಳುನಾಡು ಸರ್ಕಾರ ಒತ್ತಾಯಪಡಿಸುತ್ತಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.