ಬುಧವಾರ, ಏಪ್ರಿಲ್ 14, 2021
23 °C

50 ವರ್ಷಗಳ ಹಿಂದೆ: ಸೋಮವಾರ 8–3–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೋಕಸಭೆ ಚುನಾವಣೆ ಶಾಂತಿಯುತ
ಬೆಂಗಳೂರು, ಮಾರ್ಚ್‌ 7–
ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಇಂದು ಶಾಂತ ರೀತಿಯಿಂದ ಮುಗಿಯಿತು. ಒಟ್ಟು 27 ಲೋಕಸಭಾ ಕ್ಷೇತ್ರಗಳಲ್ಲೂ ಮಧ್ಯಂತರ ಚುನಾವಣೆಯ ಫಲಿತಾಂಶಕ್ಕಾಗಿ ಕಾಯುವ ತವಕದ ವಾತಾವರಣ ಆವರಿಸಿದೆ.

ವಿದ್ಯಾವಂತರ ವಿಶೇಷ ಆಸ್ಥೆ
ಬೆಂಗಳೂರು, ಮಾರ್ಚ್ 7–
ಕೇಂದ್ರದ ಸಚಿವ ಶ್ರೀ ಕೆ.ಹನುಮಂತಯ್ಯ ಹಾಗೂ ಪ್ರೊ. ಗೋಪಾಲಕೃಷ್ಣ ಅಡಿಗರಲ್ಲಿ ಬೆಂಗಳೂರು ಕ್ಷೇತ್ರದ ಮತದಾರರು ಯಾರನ್ನು ಆರಿಸಿದ್ದಾರೆ ಎಂದು ಹೇಳುವುದು ಕಷ್ಟವಾಗಿದೆ.

ವಿದ್ಯಾವಂತ ಮತದಾರರಲ್ಲಿ ಬಹು ಮಂದಿ ಇಂದು ಮತಗಟ್ಟೆಗೆ ಬಂದ ಕಾರಣ ‘ನಮ್ಮ ಅಭ್ಯರ್ಥಿ ಅಡಿಗರು ಗೆಲ್ಲುವರು’ ಎಂಬ ಆಶಯ ಜನಸಂಘಕ್ಕೆ ಮೂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು