ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಶನಿವಾರ 13–3–1971

Last Updated 12 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಎಲ್ಲ 27 ಸ್ಥಾನಗಳೂ ಆಡಳಿತ ಕಾಂಗ್ರೆಸ್ಸಿಗೆ; ರಾಜ್ಯದ ವಿಕ್ರಮ
ಬೆಂಗಳೂರು, ಮಾರ್ಚ್ 12–
ಎಲ್ಲ 27 ಲೋಕಸಭೆ ಕ್ಷೇತ್ರಗಳಲ್ಲೂ ಆಡಳಿತ ಕಾಂಗ್ರೆಸ್ಸಿನ ಜಯಭೇರಿ ಮೊಳಗಿಸಿ, ಭಾರತದ ಮಧ್ಯಂತರ ಚುನಾವಣೆಯಲ್ಲಿ ಮೈಸೂರು ರಾಜ್ಯ ಐತಿಹಾಸಿಕ ವಿಕ್ರಮವನ್ನು ನಿರ್ಮಿಸಿದೆ.

ಇರುವ ಎಲ್ಲ ಕ್ಷೇತ್ರಗಳಿಂದ ಒಂದೇ ಪಕ್ಷದ ಅಭ್ಯರ್ಥಿಗಳನ್ನು ಆರಿಸಿ ಕಳುಹಿಸಿರುವ ಏಕಮಾತ್ರ ರಾಜ್ಯ ಮೈಸೂರು. ವಿಶಾಲ ಮೈಸೂರಿನ ಚರಿತ್ರೆಯಲ್ಲೂ ಈ ಸಾಧನೆ ಇದೇ ಮೊದಲು.

ಹೊಸ ಲೋಕಸಭೆಯಲ್ಲಿ ವಿರೋಧ ಪಕ್ಷವೇ ಇಲ್ಲ
ನವದೆಹಲಿ, ಮಾರ್ಚ್ 12–
ಹೊಸ ಲೋಕಸಭೆಯಲ್ಲಿ ಮನ್ನಣೆ ಪಡೆದ ಯಾವುದೇ ವಿರೋಧ ಪಕ್ಷವೂ ಇರುವಂತೆ ಕಾಣಲಿಲ್ಲ.

ಏಕೆಂದರೆ ಇಡೀ ಸಭೆಯ ಹತ್ತನೇ ಒಂದು ಭಾಗ ಸದಸ್ಯರ ಸಂಖ್ಯೆ ಇರುವ ಪಕ್ಷಕ್ಕೆ ಮಾತ್ರವೇ ಅಧಿಕೃತ ಮನ್ನಣೆ ಲಭ್ಯ. ಈಗ 21 ಸ್ಥಾನಗಳನ್ನು ಪಡೆದಿರುವ ಜನಸಂಘಕ್ಕೆ ಇನ್ನಷ್ಟು ಬಹುಮತ ದುರ್ಲಭ.

ಕಳೆದ ನಾಲ್ಕು ಲೋಕಸಭೆ ಚುನಾವಣೆ ಗಳಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನ ಗಳಿಸುವಷ್ಟು ಬಹುಮತ ಯಾವುದೇ ಪಕ್ಷಕ್ಕೂ ಸಿಗಲಿಲ್ಲ. ಆದರೆ, ಕಾಂಗ್ರೆಸ್ ಇಬ್ಭಾಗದ ನಂತರ 65 ಸದಸ್ಯ ಸಂಖ್ಯೆ ಪಡೆದಿದ್ದ ಸಂಸ್ಥಾ ಕಾಂಗ್ರೆಸ್, ಸಭೆಯಲ್ಲಿ ಅಧಿಕೃತ ಸ್ಥಾನಮಾನ ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT