ಭಾನುವಾರ, ಏಪ್ರಿಲ್ 11, 2021
22 °C

50 ವರ್ಷಗಳ ಹಿಂದೆ: ಬುಧವಾರ 7–4–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಲ್ಹೆಟ್ ವಿಮುಕ್ತ
ಢಾಕಾ, ಏ. 6–
ಎರಡು ದಿನಗಳ ಉಗ್ರ ಕಾಳಗದ ನಂತರ ಬಾಂಗ್ಲಾದೇಶದ ‘ಮುಕ್ತಿ ಫೌಜ್’ ಇಂದು ಸಿಲ್ಹೆಟ್ ನಗರವನ್ನು
ಸ್ವಾಧೀನಪಡಿಸಿಕೊಂಡು ಪಾಕಿಸ್ತಾನಿ ಪಡೆಗಳನ್ನು ಕೆಲವು ಕಿಲೊಮೀಟರುಗಳ ದೂರದ ಖದೀಂ ನಗರದಲ್ಲಿರುವ ಶಿಬಿರಗಳಿಗೆ ಅಟ್ಟಿತೆಂದು ಗಡಿಯಾಚೆಯಿಂದ ವರದಿ ಬಂದಿದೆ.

ಸೈನ್ಯವು ಶಿಬಿರಗಳಿಗೆ ಹಿಮ್ಮೆಟ್ಟಿದ ನಂತರ ಪಾಕಿಸ್ತಾನಿ ವಿಮಾನಗಳು ನಗರದ ಮೇಲೆ ಹಾಗೂ ವಿಮೋಚನಾ ಪಡೆ ವಶಪಡಿಸಿಕೊಂಡ ಪಕ್ಕದ ಸಲೂಶಿಕಾರ್ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ ನಡೆಸಿದವೆಂದು ವರದಿಯಾಗಿದೆ.

ಗುಜರಾತಿಗೆ ಮತ್ತೆ ಸಂಸ್ಥಾ ಕಾಂಗ್ರೆಸ್ ಸರ್ಕಾರ– ಇಂದು ಅಧಿಕಾರಕ್ಕೆ
ಅಹಮದಾಬಾದ್, ಏ. 6–
ಗುಜರಾತ್‌ನಲ್ಲಿ ಹೊಸ ಸರ್ಕಾರ ರಚಿಸಲು ರಾಜ್ಯಪಾಲ ಶ್ರೀಮನ್ ನಾರಾಯಣ್ ಅವರು ಇಂದು ಉಸ್ತುವಾರಿ ಸರ್ಕಾರದ ಮುಖ್ಯಮಂತ್ರಿ ಹಿತೇಂದ್ರ ದೇಸಾಯಿ ಅವರನ್ನು ಆಹ್ವಾನಿಸಿದರು.

ಹೊಸ ಸಂಪುಟವು ಬುಧವಾರ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸುತ್ತದೆ.

‘ಎರಡೂ ಕಾಂಗ್ರೆಸ್ ಪಕ್ಷಗಳ ಪುನರೇಕೀಕರಣ’ದ ಹೆಸರಿನಲ್ಲಿ ತನ್ನ ಹಿಂದಿನ ಅನೇಕ ಶಾಸಕರನ್ನು ಮತ್ತೆ ತನ್ನ ಮಡಿಲಿಗೆ ತಂದುಕೊಳ್ಳುವುದರಲ್ಲಿ ಸಂಸ್ಥಾ ಕಾಂಗ್ರೆಸ್ ಇಂದು ಯಶಸ್ವಿಯಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು