ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಗುರುವಾರ 8.4.1971

Last Updated 7 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಇನ್ನು ಉತ್ತಮ ಕನ್ನಡ ಚಿತ್ರಗಳಿಗೆ ಮಾತ್ರ ಸಹಾಯಧನ ನೀಡಿಕೆ?
ಬೆಂಗಳೂರು, ಏ. 7–
ಇನ್ನು ಮುಂದೆ ಕನ್ನಡ ಚಲನಚಿತ್ರಗಳಲ್ಲಿ ಉತ್ತಮವಾದವು ಎಂದು ನಿರ್ಧರಿಸಲಾಗುವ ಚಿತ್ರಗಳಿಗೆ ಮಾತ್ರ ಸರ್ಕಾರದ ಸಹಾಯಧನ ದೊರೆಯುವ ಸಂಭವವಿದೆ.

ಕೆಟ್ಟ ಚಲನಚಿತ್ರಗಳಿಗೆ ಸಹಾಯಧನ ನೀಡುವುದು ‘ಸಾರ್ವಜನಿಕ ಹಣದ ಪೋಲು’ ಎಂದು ರಾಜ್ಯಪಾಲ ಶ್ರೀ ಧರ್ಮವೀರ ಅವರು ಬೆಳಿಗ್ಗೆ ವರದಿಗಾರರಿಗೆ ತಿಳಿಸಿದರು.

ರಾಜ್ಯದಲ್ಲಿ ತಯಾರಾಗುವ ಚಲನಚಿತ್ರಗಳಿಗೆ ತಲಾ 5 ಸಾವಿರ ರೂ. ಸಹಾಯಧನ ನೀಡುವ ಯೋಜನೆಯನ್ನು 1971ರ ಮಾರ್ಚಿ ಅಂತ್ಯದವರೆಗೆ ಶ್ರೀ ವೀರೇಂದ್ರ ಪಾಟೀಲರ ಮಂತ್ರಿಮಂಡಲ ನಿರ್ಧರಿಸಿತ್ತು.

ಭಾರತ ‘ಕೈವಾಡ’ ಚೀನೀ ಆರೋಪ
ಟೋಕಿಯೊ, ಏ. 7–
ಭಾರತವು ಪಾಕಿಸ್ತಾನದ ಆಂತರಿಕ ವ್ಯವಹಾರಗಳಲ್ಲಿ ‘ಕೈ ಹಾಕುತ್ತಿದೆ’ ಎಂದೂ ನವದೆಹಲಿಯಲ್ಲಿರುವ ಚೀನೀ ರಾಯಭಾರಿ ಕಚೇರಿ ವಿರುದ್ಧ ‘ಪ್ರಚೋದನೆಗಳ ಬಗೆಗೆ ಕಂಡೂ ಕಾಣದಂತೆ’ ಇದೆಯೆಂದೂ ಕಮ್ಯುನಿಸ್ಟ್‌ ಚೀನಾ ಆರೋಪಿಸಿರುವುದಾಗಿ ನವಚೀನಾ ವಾರ್ತಾ ಸಂಸ್ಥೆ ಇಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT