ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ 31–8–1971

Last Updated 30 ಆಗಸ್ಟ್ 2021, 19:45 IST
ಅಕ್ಷರ ಗಾತ್ರ

ಕಲ್ಪನಾ, ರಾಜಕುಮಾರ್, ಪುಟ್ಟಣ್ಣ ಇವರಿಗೆ ರಾಜ್ಯ ಪ್ರಶಸ್ತಿ
ಬೆಂಗಳೂರು, ಆ. 30– ಶರಪಂಜರಕ್ಕೆ ರಾಜ್ಯ ಸರ್ಕಾರದ 1980–81ರ ಚಲನಚಿತ್ರ ಪ್ರಶಸ್ತಿ ಬಂದಿದೆ. ರಾಜಕುಮಾರ್ (ಕುಲ ಗೌರವ) ಅವರು ಶ್ರೇಷ್ಠ ನಟ ಮತ್ತು ಕಲ್ಪನಾ (ಶರಪಂಜರ) ಅವರು ಶ್ರೇಷ್ಠ ನಟಿಯೆಂದು ರಾಜ್ಯಗೌರವ ಪಡೆದಿದ್ದಾರೆ.

ಎರಡನೇ ಬಹುಮಾನಕ್ಕಾಗಿ ‘ಸಂಸ್ಕಾರ’ ವನ್ನು, ಮೂರನೇ ಬಹುಮಾನಕ್ಕಾಗಿ ‘ಕುಲ ಗೌರವ’ವನ್ನು ಆಯ್ಕೆ ಸಮಿತಿ ಆರಿಸಿದೆಯೆಂದು ವರದಿಯಾಗಿದೆ.

ವಿವರಗಳಿವು: ಶ್ರೇಷ್ಠ ಚಿತ್ರ– ಶರಪಂಜರ (ನಿರ್ದೇಶಕ: ಎಸ್.ಆರ್. ಪುಟ್ಟಣ್ಣ ಕಣಗಾಲ್), ದ್ವಿತೀಯ ಬಹುಮಾನ–ಸಂಸ್ಕಾರ (ನಿರ್ದೇಶಕ– ಪಟ್ಟಾಭಿ ರಾಮರೆಡ್ಡಿ), 3ನೇ ಬಹುಮಾನ– ಕುಲಗೌರವ (ನಿರ್ದೇಶಕ–ಪೇಕೇಟಿ ಶಿವರಾಂ) ಸಹಾಯಕ ನಟ–ಬಿ.ಆರ್. ಜಯರಾಂ (ಸಂಸ್ಕಾರ), ಸಹಾಯಕ ನಟಿ– ಜಯಶ್ರೀ (ಅಮರ ಭಾರತಿ), ಕಥೆ–ಯು.ಆರ್. ಅನಂತ ಮೂರ್ತಿ (ಸಂಸ್ಕಾರ), ಚಿತ್ರಕಥೆ–ಎಸ್.ಆರ್. ಪುಟ್ಟಣ್ಣ ಕಣಗಾಲ್ (ಶರಪಂಜರ), ಸಂಭಾಷಣೆ– ಉದಯಶಂಕರ್ (ಕುಲ ಗೌರವ), ಸಂಗೀತ ನಿರ್ದೇಶಕ– ಸಲೀಲ್ ಚೌಧುರಿ (ಸಂಶಯಫಲ), ಛಾಯಾಗ್ರಹಣ– ಟಾಮ್ ಕೊವಾನ್ (ಸಂಸ್ಕಾರ), ಧ್ವನಿಗ್ರಹಣ–ಶ್ರೀನಿವಾಸ್‌ (ಕುಲಗೌರವ), ಸಂಕಲನ– ಭಕ್ತವತ್ಸಲ (ಕುಲಗೌರವ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT