ಶುಕ್ರವಾರ, ಜುಲೈ 1, 2022
22 °C

50 ವರ್ಷಗಳ ಹಿಂದೆ: ಬುಧವಾರ, ಡಿಸೆಂಬರ್ 22, 1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದೇಶಿ ನೆರವು ಕೋರದೆ ಸ್ವಾವಲಬನೆ ಸಾಧಿಸಲು ಪ್ರಧಾನಿ ಇಂದಿರಾ ಕರೆ

ನವದೆಹಲಿ, ಡಿ. 21– ಬಾಂಗ್ಲಾದೇಶ ಸರ್ಕಾರವು ತನ್ನ ಆರ್ಥಿಕ ರಂಗವನ್ನು ಪುನರ್‌ರಚಿಸಿಕೊಳ್ಳಲು ಭಾರತ ನೆರವು ನೀಡುವುದಕ್ಕೆ ಬದ್ಧವಾಗಿದೆಯೆಂದೂ, ಭಾರತವು ವಿದೇಶೀ ನೆರವಿನ ಮೇಲೆ ಅವಲಂಬಿಸುವುದನ್ನು ಇನ್ನಷ್ಟು ಕಡಿಮೆ ಮಾಡುವುದು ಅಗತ್ಯವೆಂದೂ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಇಂದು ಒತ್ತಿ ಹೇಳಿದರು.

ಇಂದು ಯೋಜನಾ ಆಯೋಗದ ಪೂರ್ಣ ಸಭೆಯನ್ನು ಉದ್ದೇಶಿಸಿ ಮಾತನಾಡು ತ್ತಿದ್ದ ಅವರು, ಭಾರತಕ್ಕೆ ಅಮೆರಿಕ ನೆರವು ನಿಲ್ಲಿಸಿರುವುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿ, ‘ವಿದೇಶಗಳು ಈ ನೆರವನ್ನು, ಬಡರಾಷ್ಟ್ರಗಳ ಕಷ್ಟದ ಸಮಯದಲ್ಲಿ ದುರುಪಯೋಗ ಪಡಿಸಿಕೊಳ್ಳುವ ಸಾಧನವನ್ನಾಗಿ ಮಾಡಿ ಕೊಂಡಿವೆ’ ಎಂದು ನುಡಿದರು.

ಭಾರತವು ಸಂಪನ್ಮೂಲಗಳಿಗಾಗಿ ವಿದೇಶ ಗಳತ್ತ ಕೈಚಾಚಿ ಕಾದು ಕುಳಿತುಕೊಳ್ಳುವುದನ್ನು ಕಡಿಮೆ ಮಾಡಿ, ಅದನ್ನು ತನ್ನಲ್ಲಿಯೇ ಉತ್ಪತ್ತಿ ಮಾಡಿಕೊಳ್ಳಬೇಕು. ಕೇವಲ ಅನಿವಾರ್ಯವಾದ ಕಷ್ಟದ ಸಮಯಗಳಲ್ಲಿ ಮತ್ತು ನಿರ್ದಿಷ್ಟ  ಉದ್ದೇಶಳಿಗಾಗಿ ಮಾತ್ರ ವಿದೇಶಿ ನೆರವಿಗಾಗಿ ಯಾಚಿಸಬೇಕು ಎಂದು ಅವರು ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು