ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ 7–11–1972

Last Updated 6 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಆದಾಯಗಳ ಸಮರ್ಪಕ ಹಂಚಿಕೆ ಸ್ವಾವಲಂಬನೆಗೆ ಪ್ರಧಾನಿ ಇಂದಿರಾ ಕರೆ
ನವದೆಹಲಿ, ನ. 6–
ಆರ್ಥಿಕ ಬೆಳವಣಿಯೊಡನೆ ‘ದೃಢ ಮತ್ತು ಚೈತನ್ಯಶೀಲ ಸಮಾಜಗಳ’ ನಿರ್ಮಾಣಕ್ಕಾಗಿ ಆದಾಯಗಳ ಸಮರ್ಪಕ ವಿತರಣೆಯಾಗುವಂತೆ ಅಭಿವೃದ್ಧಿಶೀಲ ರಾಷ್ಟ್ರಗಳು ನೋಡಿಕೊಳ್ಳಬೇಕೆಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಹೇಳಿದರು.

ಕೊಲಂಬೊ ಯೋಜನೆ ಸಮಾಲೋಚಕ ಸಮಿತಿಯ ಎರಡನೇ ಸಭೆಯನ್ನು ಇಂದು ಇಲ್ಲಿ ಉದ್ಘಾಟಿಸಿದ ಶ್ರೀಮತಿ ಗಾಂಧಿ ಅವರು, ಸುಭದ್ರ ಬೆಳವಣಿಗೆಗಾಗಿ ಸ್ವಾವಲಂಬನೆ ಮುಖ್ಯ ಅವಶ್ಯಕತೆಯೆಂದು ಹೇಳಿದರಾದರೂ, ಸ್ವಾವಲಂಬನೆ ಎಂದರೆ ಅಂತರರಾಷ್ಟ್ರೀಯ ಸಹಕಾರ ಕಡಿಮೆಯಾಗಬೇಕೆಂಬ ಅರ್ಥವಲ್ಲ ಎಂದರು.

ಡಿಎಂಕೆ ಸಚಿವ ಸಂಪುಟದ ವಿರುದ್ಧ ಆರೋಪ: ಶೀಘ್ರ ತನಿಖಾ ಆಯೋಗ ನೇಮಕಕ್ಕೆ ಒತ್ತಾಯ
ನವದೆಹಲಿ, ನ. 6–
ತಮಿಳುನಾಡು ಸಚಿವ ಸಂಪುಟದ ವಿರುದ್ಧ ಭ್ರಷ್ಟಾಚಾರ ಆರೋಪಗಳ ತನಿಖೆಗೆ ಕೂಡಲೇ ಆಯೋಗ ವೊಂದನ್ನು ನೇಮಿಸಬೇಕೆಂದು ಅಣ್ಣಾ ಡಿಎಂಕೆ ಮತ್ತು ಕಮ್ಯುನಿಸ್ಟ್ ಪಕ್ಷದ ತಮಿಳು ನಾಡು ಸಮಿತಿ ಇಂದು ರಾಷ್ಟ್ರಪತಿಯವರನ್ನು ಒತ್ತಾಯ ಮಾಡಿದವು. ಎಂ.ಜಿ. ರಾಮಚಂದ್ರನ್ ಮತ್ತು ಕಮ್ಯು ನಿಸ್ಟ್ ಪಕ್ಷದ ಎಂ. ಕಲ್ಯಾಣಸುಂದರಂ ಪ್ರತ್ಯೇಕ ವಾಗಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT