ಹಿಂಸಾತ್ಮಕ ಹಾದಿ ಬಿಟ್ಟು ಕಮ್ಯುನಿಸ್ಟರ ನವಪಥಕ್ರಮಣ?

ಮುಂಬಯಿ, ಜೂನ್, 15– ಭಾರತ ಕಮ್ಯುನಿಸ್ಟ್ ಪಕ್ಷದವರು ತಮ್ಮ ಪ್ರಸ್ತುತ ‘ವಿಧ್ವಂಸಕಾರಕ, ಹಿಂಸಾತ್ಮಕ ಧೋರಣೆ ಬದಲಾಯಿಸಿ, ಸಮಾಜವಾದದ ನೀತಿಯನ್ನು ಚೀನಿ ನಾಯಕ ಮಾವೋ ತ್ಸೆ ತುಂಗರ ರೀತಿಗೆ ಹೆಚ್ಚು ಹೊಂದಿಕೊಂಡಂತೆ ಅನುಸರಿಸುವರೆಂದು ಮುಂಬಯಿಯಲ್ಲಿ ವ್ಯಕ್ತಪಟ್ಟಿರುವ ಚಿಹ್ನೆಗಳಿಂದ ತಿಳಿದು ಬಂದಿದೆ. ಪಕ್ಷದ ನೀತಿ ನಿರ್ಮಾಪಕ ಸಂಸ್ಥೆ ಯಾದ ‘ಪೊಲಿಟ್ ಬ್ಯೂರೋ’ ಮುಂದಿನ ತಿಂಗಳು ಮಧ್ಯ ಭಾರತ ದಲ್ಲಿ ಸಂಧಿಸಿದಾಗ ಹೊಸ ನಾಯಕತ್ವ ತಲೆದೋರುವ ಸಂಭವವಿದೆ.

ಪಂಡಿತ್ ನೆಹರೂಗೆ ಚಿನ್ನದ ಕತ್ತಿ

ಜಕಾರ್ಥ, ಜೂ. 15– ಬಾಲಿ ದ್ವೀಪದ ಮುಖ್ಯಸ್ಥರು, ಇಂದು ಬೆಳಿಗ್ಗೆ ಭಾರತ ಪ್ರಧಾನಿ ಪಂಡಿತ್ ನೆಹರೂರವರಿಗೆ ಇಂಡೋನೇಷಿಯನ್ ಸ್ವಾತಂತ್ರ್ಯದಲ್ಲಿ ಭಾರತ ವಹಿಸಿದ ಪ್ರಯತ್ನಗಳ ‘ಕೃತಜ್ಞತೆ ಹಾಗೂ ಮೆಚ್ಚುಗೆಯ ಅಭಿಜ್ಞಾನವಾಗಿ’ ಚಿನ್ನದ ಕತ್ತಿಯೊಂದನ್ನು ಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.