ತಟಸ್ಥ ವ್ಯಕ್ತಿಯ ನಿರ್ದೇಶನದ ಜನಮತಗಣನೆಗೆ ಕಾಶ್ಮೀರ ಸಿದ್ಧ: ಷೇಕ್ ಅಬ್ದುಲ್ಲಾ

ಶ್ರೀನಗರ, ಮೇ 13– ಜನಮತಗಣನೆಗೆ ಕಾಶ್ಮೀರ ಸಿದ್ಧವಾಗಿಯೆ ಇದೆ. ಆದರೆ, ಅದನ್ನು ನಡೆಸುವವರು ನಿಜವಾಗಿ ತಟಸ್ಥರಾಗಿದ್ದು, ಕಾಶ್ಮೀರದ ಕ್ರಮಬದ್ಧ ಸರ್ಕಾರದಿಂದ ಅಧಿಕಾರ ಪಡೆದಿರುವವರಾಗಿರಬೇಕಲ್ಲದೆ ಕಾಶ್ಮೀರದ ಪೂರ್ಣ ಪ್ರದೇಶವನ್ನು ಕ್ರಮಬದ್ಧ ಸರ್ಕಾರದ ಅಧೀನಕ್ಕೆ ವಶಪಡಿಸಬೇಕು ಎಂದು ಕಾಶ್ಮೀರದ ಪ್ರಧಾನಿ ಷೇಕ್ ಮಹಮದ್ ಅಬ್ದುಲ್ಲಾರು, ಕಾಶ್ಮೀರದಲ್ಲಿ ಪ್ರವಾಸ ಮಾಡುತ್ತಿರುವ ಮುಂಬೈನ ವಿದ್ಯಾರ್ಥಿ
ಗಳ ಗುಂಪೊಂದು ಹಾಕಿದ ಪ್ರಶ್ನೆಗಳಿಗೆ ಉತ್ತರವಾಗಿ ಈ ದಿನ ತಿಳಿಸಿದರು.

ವಿಶ್ವಸಂಸ್ಥೆಯ ಕಾಶ್ಮೀರ ವಿವಾದದಹೊಸ ಪ್ರತಿನಿಧಿ ಡಾ. ಫ್ರಾಂಕ್ ಅಬ್ರಹಾಮರ ಬಗ್ಗೆ ಹಾಕಿದ ಪ್ರಶ್ನೆಗೆ ನೇರವಾಗಿ ಉತ್ತರ ಕೊಡದೆ, ತಮ್ಮ ವಿದೇಶಾಂಗ ವ್ಯವಹಾರಗಳನ್ನು ಒಪ್ಪಿಸಿರುವ ಪ್ರಧಾನಿ ನೆಹರೂರವರಲ್ಲಿ ಕಾಶ್ಮೀರಿಗಳಿಗೆ ಅಚಲ ನಂಬಿಕೆಯಿದೆ ಎಂದು ಹೇಳಿ ಅಬ್ದುಲ್ಲಾ ಅವರು ಸುಮ್ಮನಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.